ಸೋಮವಾರ, ಫೆಬ್ರವರಿ 24, 2020
19 °C

ಟಿಡಿಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ: ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೂ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಹಾಲಿ ಸಂಸದರಲ್ಲಿ ಹೆಚ್ಚಿನವರಿಗೆ ಮರುಆಯ್ಕೆ ಅವಕಾಶ ನೀಡಲಾಗಿದ್ದು ಕೆಲವು ಕ್ಷೇತ್ರಗಳಲ್ಲಿ ಸಂಸದರ ಕುಟುಂಬದವರಿಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ತ್ಯಜಿಸಿ ಇತ್ತೀಚೆಗಷ್ಟೇ ಟಿಡಿಪಿ ಸೇರ್ಪಡೆಯಾಗಿರುವ ಕೇಂದ್ರದ ಮೂವರು ಮಾಜಿ ಸಚಿವರಿಗೆ ಟಿಕೆಟ್‌ ನೀಡಲಾಗಿದೆ. ವಿ. ಕಿಶೋರ್‌ಚಂದ್ರ ದೇವ್‌ ಅವರಿಗೆ ಅರಕು ಕ್ಷೇತ್ರದಿಂದ, ಕೋಟ್ಲ ಸೂರ್ಯಪ್ರಕಾಶ ರೆಡ್ಡಿ ಅವರಿಗೆ ಕರ್ನೂಲ್‌ ಹಾಗೂ ಪಿ. ಲಕ್ಷ್ಮಿ ಅವರಿಗೆ ತಿರುಪತಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ನಂದಮೂರಿ ಬಾಲಕೃಷ್ಣ ಅವರ ಅಳಿಯ ಎಂ. ಭರತ್‌ ವಿಶಾಖಪಟ್ಟಣದಿಂದ ಸ್ಪರ್ಧಿಸಲಿದ್ದಾರೆ. ಇತರ ಪಕ್ಷಗಳೊಡನೆ ಮಾಡಿಕೊಂಡಿರುವ ಕ್ಷೇತ್ರ ಹೊಂದಾಣಿಕೆಯ ಕಾರಣದಿಂದಾಗಿ ರಾಜ್ಯದ ಪಶುಸಂಗೋಪನಾ ಸಚಿವ ಸಿ. ಆದಿನಾರಾಯಣ ರೆಡ್ಡಿ ಅವರು ಈ ಬಾರಿ ವಿಧಾನಸಭೆಯ ಬದಲು, ಕಡಪಾ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ.

ಲೋಕಸಭೆಯ ಮಾಜಿ ಸ್ಪೀಕರ್‌ ಜಿ. ಮೋಹನಚಂದ್ರ ಬಾಲಯೋಗಿ ಅವರ ಪುತ್ರ ಹರೀಶ್‌ ಅವರು ಎಸ್‌ಸಿ ಮೀಸಲು ಕ್ಷೇತ್ರ ಅಮಲಾಪುರಂನಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವರು. ಅನಂತಪುರಂನ ಹಾಲಿ ಸಂಸದ ಜೆ.ಸಿ. ದಿವಾಕರ ರೆಡ್ಡಿ ಹಾಗೂ ರಾಜಮಹೇಂದ್ರವರಂನ ಸಂಸದ ಮಾಗಂಟಿ ಮುರಳಿ ಮೋಹನ್‌ ಅವರು ಈ ಬಾರಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಹಾಗಾಗಿ, ದಿವಾಕರ್‌ ಅವರ ಪುತ್ರ ಪವನ್‌ ರೆಡ್ಡಿ ಹಾಗೂ ಮುರಳಿ ಮೋಹನ್‌ರ ಸೊಸೆ ಮಾಗಂಟಿ ರೂಪಾ ಅವರಿಗೆ ಆಯಾ ಕ್ಷೇತ್ರಗಳಿಂದ ಟಿಕೆಟ್‌ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು