ಶನಿವಾರ, ಫೆಬ್ರವರಿ 27, 2021
30 °C

ಉತ್ತರ ಪ್ರದೇಶ: ತಂದೆಯ ಬೇಕರಿಯಲ್ಲೇ ದುರಂತ, ಓವನ್‌ನಲ್ಲಿ ಸಜೀವವಾಗಿ ಬೆಂದ ಬಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಬಿಸ್ಕತ್‌ ಕಾರ್ಖಾನೆಯ ಓವನ್‌ನಲ್ಲಿ ಸಿಲುಕಿ ಬಾಲಕ ಸಜೀವವಾಗಿ ಬೆಂದಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಖೈರಪುರ್ ರಾಮನಾಥ ಗ್ರಾಮದ ದೀಪಕ್‌ ಜೈಸ್ವಾಲ್‌ (15) ಮೃತ ಬಾಲಕ.

ಬಾಲಕನ ತಂದೆಯ ಬೇಕರಿಯಲ್ಲಿಯೇ ಈ ದುರಂತ ಸಂಭವಿಸಿದೆ. ನೌಕರರೆಲ್ಲ ಮನೆಗೆ ಹೋದ ಬಳಿಕ ಬಾಲಕ ಓವನ್‌ ಬಂದ್‌ ಮಾಡಲು ಹೋಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಅದರೊಳಗೆ ಸಿಲುಕಿಕೊಂಡಿದ್ದಾನೆ. ಅಲ್ಲಿಂದ ಹೊರ ಬರುವುದು ಆತನಿಗೆ ಸಾಧ್ಯವಾಗಲಿಲ್ಲ. ಕೆಲ ಸಮಯದ ನಂತರ ಮಗನನ್ನು ಹುಡುಕಲು ಪ್ರಾರಂಭಿಸಿದ ಪೋಷಕರಿಗೆ ಬಾಲಕ ಓವನ್‌ನಲ್ಲಿ ಸಿಲುಕಿಕೊಂಡಿರುವುದು ಗೊತ್ತಾಗಿದೆ.

ಬಾಗಿಲು ಒಡೆದು ಬಾಲಕನನ್ನು ಹೊರತೆಗೆದಿದ್ದಾರೆ. ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಅವನನ್ನು ಆಸ್ಪತ್ರೆಗೆ ಸಾಗಿಲಾಯಿತು. ಆದರೆ ವೈದ್ಯರು, ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದರು.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು