ಗುರುವಾರ , ಏಪ್ರಿಲ್ 2, 2020
19 °C

ತೇಜ್ ಪ್ರತಾಪ್ ಯಾದವ್‍ ಅವರ ಭದ್ರತಾ ಸಿಬ್ಬಂದಿಯಿಂದ ಛಾಯಾಗ್ರಾಹಕನ ಮೇಲೆ ಹಲ್ಲೆ

ಎಎನ್ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಭದ್ರತಾ ಸಿಬ್ಬಂದಿ ಭಾನುವಾರ ಪತ್ರಿಕಾ ಛಾಯಾಗ್ರಾಹರೊಬ್ಬರ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾದ ಛಾಯಾಗ್ರಾಹಕ ತೇಜ್ ಯಾದವ್‌ನ ಕಾರಿಗೆ ಹಾನಿ ಮಾಡಿದ್ದ ಎಂದು ಆರೋಪಿಸಲಾಗಿದೆ. ತೇಜ್ ಯಾದವ್ ಮತಚಲಾಯಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

ತೇಜ್ ಯಾದವ್ ಹೇಳಿದ್ದೇನು? 
ಈ ಘಟನೆ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತೇಜ್,  ನನ್ನ ಬೌನ್ಸರ್‌ಗಳು ಯಾರ ಮೇಲೂ ಹಲ್ಲೆ ನಡೆಸಿಲ್ಲ.ನಾನು ಮತಗಟ್ಟೆಗೆ ಹೋದಾಗ ಕೆಲವೊಂದು ಮಾಧ್ಯಮದವರು ನನ್ನ ವಾಹನವನ್ನು ಸುತ್ತುವರಿದಿದ್ದಾರೆ. ಅದರಲ್ಲಿ ಒಬ್ಬ ಛಾಯಾಗ್ರಾಹಕ ನನ್ನ ಕಾರಿನ ವಿಂಡ್‌ಸ್ಕ್ರೀನ್‌ ಒಡೆದು ಹಾಕಿದ್ದಾನೆ.
ಈ ಪ್ರಕರಣದ ಬಗ್ಗೆ ನಾನು ಎಫ್‌ಐಆರ್ ದಾಖಲಿಸಿದ್ದೇನೆ. ಈ ಹಿಂದೆಯೂ ನನಗೆ ಬೆದರಿಕೆಗಳು ಬಂದಿತ್ತು. ನನ್ನ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನನ್ನನ್ನು ಹತ್ಯೆ ಮಾಡಲು ಇದೊಂದು ಸಂಚು ಆಗಿದ್ದು,  ಪೂರ್ವಯೋಜಿತ ಕೃತ್ಯ ಎಂದಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು