ಭಾನುವಾರ, ಜನವರಿ 19, 2020
27 °C

‘ತೇಜಸ್‌’ ಯಶಸ್ವಿ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶೀಯ ನಿರ್ಮಿತ ನೌಕಾಪಡೆ ಆವೃತ್ತಿಯ ಲಘು ಯುದ್ಧ ವಿಮಾನ ‘ತೇಜಸ್‌’ ದೇಶದ ಏಕೈಕ ಯುದ್ಧವಿಮಾನ ವಾಹಕ ಹಡಗು ‘ಐಎನ್‌ಎಸ್‌ ವಿಕ್ರಮಾದಿತ್ಯ’ದಿಂದ ಭಾನುವಾರ ಯಶಸ್ವಿಯಾಗಿ ಹಾರಾಟ ನಡೆಸಿತು.

ಇದನ್ನು ‘ಸ್ಕೈ ಜಂಪ್‌’ ಎಂದೂ ಕರೆಯಲಾಗುತ್ತದೆ. ಶನಿವಾರ ‘ತೇಜಸ್‌’ ಇದೇ ಹಡಗಿನಲ್ಲಿ ಇಳಿದಿತ್ತು. ಇದು ಮಹತ್ವದ ಮೈಲುಗಲ್ಲು ಎಂದು ನೌಕಾಪಡೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ನಿಯೋಜನೆಗೊಂಡಿರುವ ‘ವಿಕ್ರಮಾದಿತ್ಯ’ ಪ್ರಸ್ತುತ ನೌಕಾಪಡೆ ಆವೃತ್ತಿಯ ‘ಮಿಗ್‌–29’ ಯುದ್ಧ ವಿಮಾನಗಳನ್ನು ಹೊಂದಿದೆ.

‘ಈ ಪರೀಕ್ಷೆಯಿಂದ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ನೌಕಾಪಡೆಯು ಕಾರ್ಯಾಚರಣೆಗೆ ಅಳವಡಿಸಿಕೊಳ್ಳುವುದು ಸ್ಪಷ್ಟವಾಗಿದೆ. ಟ್ವಿನ್‌ ಎಂಜಿನ್‌ ಯುದ್ಧ ವಿಮಾನಗಳ ತಯಾರಿಕೆಗೆ ರಹದಾರಿ ಸೃಷ್ಟಿಯಾಗಿದೆ’ ಎಂದು ನೌಕಾಪಡೆ ಟ್ವೀಟ್‌ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು