ಉಗ್ರರು ಎಸಗಿದ ದೊಡ್ಡ ಹೇಯ ಕೃತ್ಯಕ್ಕೆ ತಕ್ಕ ಬೆಲೆ ತೆರಲಿದ್ದಾರೆ: ಮೋದಿ ಎಚ್ಚರಿಕೆ

ಶನಿವಾರ, ಮೇ 25, 2019
27 °C
ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ

ಉಗ್ರರು ಎಸಗಿದ ದೊಡ್ಡ ಹೇಯ ಕೃತ್ಯಕ್ಕೆ ತಕ್ಕ ಬೆಲೆ ತೆರಲಿದ್ದಾರೆ: ಮೋದಿ ಎಚ್ಚರಿಕೆ

Published:
Updated:

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಲಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಘಟನೆ ಭಾರತದ ಜನರ ರಕ್ತ ಕುದಿಯುವಂತೆ ಮಾಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಮೋದಿ, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಈ ಹೇಯ ಕೃತ್ಯ ಎಸಗಿದ್ದಾರೆ. ಇದಕ್ಕೆ ಉಗ್ರರು ಬೆಲೆ ತೆರಲಿದ್ದಾರೆ. ಅಮಾನವೀಯವಾಗಿ ವರ್ತಿಸಿದ ಭಯೋತ್ಪಾದಕರಿಗೆ ಭಾರತ ತಕ್ಕ ಉತ್ತರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. 

ಉಗ್ರರು ಬಹು ದೊಡ್ಡ ತಪ್ಪೆಸಗಿದ್ದಾರೆ
ಉಗ್ರರು ದಾಳಿ ನಡೆಸುವ ಮೂಲಕ ಬಹು ದೊಡ್ಡ ತಪ್ಪು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ದೊಡ್ಡ ಬೆಲೆಯನ್ನೇ ತೆರಲಿದ್ದಾರೆ ಎಂದು ಮೋದಿ ಹೇಳಿದರು.

ಹುತಾತ್ಮ ಯೋಧರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸುವೆ. ದುಃಖ ನನ್ನನ್ನು ಸೇರಿ ಇಡೀ ದೇಶ ಅವರ ಕುಟುಂಬದ ಜತೆ ಇರಲಿದೆ. ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದೆ. ದೇಶದ ರಕ್ಷಣೆ ನೀಡುವ ವಿಷಯದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸೇನೆಯ ಮೇಲೆ ಸಂಪೂರ್ಣ ಭರವಸೆ ಇದೆ. ದೇಶಭಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ಭಯೋತ್ಪಾದನೆ ವಿರುದ್ಧ ಹೋರಾಡಲು ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ಸೂಚಿಸಿದೆ. ಯಾವ ಶಕ್ತಿಯೂ ಭಾರತದ ಶಾಂತಿ, ಪ್ರಗತಿ ಮತ್ತು ಸ್ಥಿರತೆಯ ವಿರುದ್ಧ ಜಯಿಸಲಾರವು ಎಂದು ಮೋದಿ ಎಚ್ಚರಿಸಿದ್ದಾರೆ.

ಉಗ್ರರ ಈ ಕೃತ್ಯವನ್ನು ಖಂಡಿಸಿ ಭಾರತಕ್ಕೆ ಬೆಂಬಲವಾಗಿ ನಿಂತ ನೆರೆ ರಾಷ್ಟ್ರಗಳಿಗೆ ಅಭಿನಂದಿಸಿದ ಮೋದಿ, ಎಲ್ಲಾ ರಾಷ್ಟ್ರಗಳು ಜತೆಗೂಡಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿದ್ದೇ ಆದಲ್ಲಿ ಭಯೋತ್ಪಾದನೆಯನ್ನು ಕಿತ್ತೊಗೆಯಬಹುದು. ಯೋಧರು ರಾಷ್ಟ್ರಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ. ಉಗ್ರರನ್ನು ಶಿಕ್ಷಿಸುವಲ್ಲಿ ಪ್ರತಿಯೊಂದು ರಾಷ್ಟ್ರವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ನಮಗಿದೆ ಎಂದು ಮೋದಿ ಹೇಳಿದರು.

130 ಕೋಟಿ ಭಾರತೀಯರು ಒಟ್ಟಾಗಿದ್ದಾರೆ. ಮಾನವತಾವಾದಿ ಶಕ್ತಿ ಒಗ್ಗೂಡಿದರೆ ಆಗಂತುಕರು ಏನನ್ನೂ ಮಾಡಲಾಗದು. ಅವರನ್ನು ಮಟ್ಟ ಹಾಕುತ್ತೇವೆ. 

ಪುಲ್ವಾಮ ಘಟನೆಯಿಂದ ನೋವಾಗಿದೆ, ವೀರ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶದ ಸುರಕ್ಷತೆ, ದೇಶದ ಸಮೃದ್ಧಿಗೆ ಶ್ರಮಿಸುವ ಯೋಧರಿಗೆ ಸದಾ ನಮನಗಳು ಎಂದರು.

ಇದನ್ನೂ ಓದಿ: ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಝಿ

ಸಮಯ, ಸ್ಥಳ, ಎದುರಾಳಿಯ ಪ್ರತಿಕ್ರಿಯೆ ಅನುಸರಿಸಿ ಉಗ್ರರ ಮೇಲೆ ಪ್ರತಿದಾಳಿ ನಡೆಸಲು ಈಗಾಗಲೇ ಭದ್ರತೆ ಪಡೆಗೆ ಅನುಮತಿ ನೀಡಲಾಗಿದೆ. ಇದು ಭಾರತದ ಹೊಸ ಒಪ್ಪಂದ ಮತ್ತು ನಿಯಮವಾಗಿದೆ ಎಂದರು.

* ಇವನ್ನೂ ಒದಿ...

ಉಗ್ರರ ದಾಳಿ: ಮಂಡ್ಯ ಯೋಧ ಹುತಾತ್ಮ

‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’

ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ, ಯೋಧರ ಶೌರ್ಯದಲ್ಲಿ ನಂಬಿಕೆ ಇದೆ: ಮೋದಿ​

ಪುಲ್ವಾಮಾ ದಾಳಿ ಪಾಕಿಸ್ತಾನ ‘ಹತಾಶೆ’ಯ ಫಲಿತಾಂಶ: ಸತ್ಯಪಾಲ್‌ ಮಲಿಕ್‌ ಹೇಳಿಕೆ​

ದಾಳಿ ನಡೆಸಿದ ಉಗ್ರ ಸಂಘಟನೆ ಮುಖ್ಯಸ್ಥ ಅಜರ್‌ಗೆ ಪಾಕ್‌ನಲ್ಲಿ ಪೂರ್ಣ ಸ್ವಾತಂತ್ರ್ಯ​

* ‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’

ಸೇನಾ ಶಿಬಿರದಲ್ಲಿ ಹುತಾತ್ಮ ಯೋಧರಿಗೆ ನಮನ​

ಹುತಾತ್ಮ ಯೋಧನಿಗೆ ಸ್ವಂತ ಜಮೀನು ಇಲ್ಲ: ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ​

ಘೋರ ದಾಳಿಗೆ ಪ್ರತೀಕಾರ ನೀಡುತ್ತೇವೆ: ಸಿಆರ್‌ಪಿಎಫ್‌ ತೀಕ್ಷ್ಣ ಪ್ರತಿಕ್ರಿಯೆ

ಜನಪ್ರತಿನಿಧಿಗಳೇನು ಕತ್ತೆ ಹಲ್ಲು ಉಜ್ಜೋಕೆ ಹೋಗಿದ್ದಾರಾ?: ಅವ್ಯವಸ್ಥೆಗೆ ಯುವಕ ಗರಂ

* ಪತಿಯನ್ನು ಕೊಂದವನ್ನು ಬ್ಲಾಸ್ಟ್‌ ಮಾಡಿ, ಬಿಡಬೇಡಿ: ಯೋಧ ಗುರು ಪತ್ನಿ ಕಲಾವತಿ 

ಯೋಧರಿಗೆ ಅಂತಿಮ ನಮನ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ರಾಜನಾಥ ಸಿಂಗ್

ಪುಲ್ವಾಮ ಉಗ್ರರ ದಾಳಿ: ಪಾಕಿಸ್ತಾನ ವಿರುದ್ಧ ಪ್ರತಿಭಟನೆ ದಾಖಲಿಸಿದ ಭಾರತ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !