ಮಂಗಳವಾರ, ಜನವರಿ 21, 2020
22 °C

ವಾಟ್ಸ್ಯಾಪ್‌ ಗ್ರೂಪ್‌ಗಳಿಂದ ಕಣ್ಮರೆ ಆಗುತ್ತಿವೆ ಕಾಶ್ಮೀರ ವಾಸಿಗಳ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ನಾಲ್ಕು ತಿಂಗಳುಗಳಿಂದ ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದ್ದರ ಪರಿಣಾಮ ವಾಟ್ಸ್ಯಾಪ್‌ ಗ್ರೂಪ್‌ಗಳಿಂದ ಕಾಶ್ಮೀರ ವಾಸಿಗಳ ಹೆಸರಗಳು ಕಣ್ಮರೆಯಾಗುತ್ತಿವೆ. 

ಈ ಬಗ್ಗೆ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿರುವ ಕೆಲ ವಾಟ್ಸ್ಯಾಪ್‌ ಬಳಕೆದಾರರು, ಕಾಶ್ಮೀರದಲ್ಲಿರುವ ತಮ್ಮ ಗೆಳೆಯರು ಮತ್ತು ಸಂಬಂಧಿಗಳ  ಹೆಸರುಗಳು ವಾಟ್ಸ್ಯಾಪ್‌ ಗ್ರೂಪ್‌ಗಳಿಂದ ಕಣ್ಮರೆಯಾಗುತ್ತಿವೆ ಎಂದಿದ್ದಾರೆ. 

ಈ ವಿಚಾರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕೆಲವರು ನಿರ್ದಿಷ್ಟವಾಗಿ ಕಾಶ್ಮೀರದಲ್ಲಿ ವಾಸಿಸುವವರ ಹೆಸರುಗಳೇ ಕ‌ಣ್ಮರೆ ಆಗುತ್ತಿರುವುದರಲ್ಲಿ ಏನೋ ಅಡಗಿದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ‘ಎನ್‌ಡಿಟಿವಿ’ಗೆ ಪ್ರತಿಕ್ರಿಯಿಸಿರುವ ವಾಟ್ಸ್ಯಾಪ್‌ ವಕ್ತಾರ, 120 ದಿನಗಳ ಕಾಲ ವಾಟ್ಸ್ಯಾಪ್‌ನಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳನ್ನು ತೆಗೆದುಹಾಕಬೇಕೆಂಬುದು ಸಂಸ್ಥೆಯ ನಿಯಮವಾಗಿದೆ ಎಂದಿದ್ದಾರೆ.  

‘ವಾಟ್ಸ್ಯಾಪ್‌ ಖಾತೆಯೊಂದು ಕಾರ್ಯ ಸ್ಥಗಿತಗೊಳಿಸಿದ 30 ದಿನಗಳ ಒಳಗೆ ಚಾಟ್‌ ಲಾಗ್ಸ್‌, ಇಮೇಜ್‌ಸ್ ಮತ್ತು ವಿಡಿಯೋಗಳಂತಹ ದತ್ತಾಂಶಗಳ ಬ್ಯಾಕ್‌ ಅಪ್ ಪಡೆಯದೇ ಹೋದರೆ, ಅಂತಹ ದತ್ತಾಂಶಗಳು ಕಣ್ಮರೆಯಾಗಬಹುದು ’ ಎಂದು ವಾಟ್ಸಾಪ್‌ ವಕ್ತಾರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು