ಸೋಮವಾರ, ಅಕ್ಟೋಬರ್ 14, 2019
28 °C

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಮನೆಯಲ್ಲಿ ಕಳ್ಳತನ: ಯುವಕನ ಬಂಧನ

Published:
Updated:
ಪೀಯೂಷ್‌ ಗೋಯಲ್‌

ಮುಂಬೈ: ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಯುವಕನನ್ನು ಕಳ್ಳತನ ಆರೋಪ‍ದ ಮೇಲೆ ಬಂಧಿಸಲಾಗಿದೆ. 

ದೆಹಲಿಯ ಮೂಲದ ವಿಷ್ಣು ಕುಮಾರ್‌ (25) ಬಂಧಿತ. ಮನೆಯ ಕಂಪ್ಯೂಟರ್‌ ಬಳಸಿ ಅಪರಿಚಿತರಿಗೆ ಮಾಹಿತಿ ಹಂಚಿದ ಆರೋಪ‍ವೂ ಈತನ ಮೇಲಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. 

ಪಾರಂಪರಿಕ ವಸ್ತುಗಳು, ಬಟ್ಟೆಗಳು ಮತ್ತು ಬೆಳ್ಳಿಯ ಪಾತ್ರೆಗಳು ಕಳುವಾಗಿರುವ ಕುರಿತು ಗೋಯಲ್‌ ಪತ್ನಿ ದೂರು ನೀಡಿದ್ದರು. ತನಿಖೆ ವೇಳೆ ಆರೋಪಿಯ ಇ–ಮೇಲ್‌ಗಳನ್ನು ಪರಿಶೀಲಿಸಿದಾ‌ಗ ಅಮೂಲ್ಯ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬುಧವಾರ ದೆಹಲಿಯಲ್ಲಿ ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

Post Comments (+)