ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ಸಾಲದ ಹೊರೆ ₹82 ಲಕ್ಷ ಕೋಟಿ!

Last Updated 20 ಜನವರಿ 2019, 5:58 IST
ಅಕ್ಷರ ಗಾತ್ರ

ನವದೆಹಲಿ:ಕಳೆದ ನಾಲ್ಕೂವರೆ ವರ್ಷದ ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಸರ್ಕಾರದ ಸಾಲ ಬಾಧ್ಯತೆ ಶೇ. 49ರಷ್ಟುಹೆಚ್ಚಾಗಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಸರ್ಕಾರದ ಸಾಲದ ಹೊರೆ ಬಗ್ಗೆ ಇರುವ ದಾಖಲೆಯ ಎಂಟನೇ ಸಂಚಿಕೆ ಶುಕ್ರವಾರ ಬಿಡುಗಡೆಯಾಗಿದ್ದು ಅದರಲ್ಲಿಈ ರೀತಿ ಹೇಳಲಾಗಿದೆ.

ಸೆಪ್ಟೆಂಬರ್ 2018ರವರೆಗೆ ಇರುವ ಮಾಹಿತಿಗಳನ್ನು ಗಮನಿಸಿದರೆ, ಜೂನ್ 2014ರ ವರೆಗೆ ಕೇಂದ್ರ ಸರ್ಕಾರದ ಸಾಲ ₹54,90,763 ಕೋಟಿ ಆಗಿತ್ತು.ಆದರೆ ಕಳೆದ ನಾಲ್ಕೂವರೆ ವರ್ಷದಲ್ಲಿ ಒಟ್ಟು ಸಾಲ ₹82,03,253 ಕೋಟಿ ಆಗಿದೆ ಎಂದು ವಿತ್ತ ಸಚಿವಾಲಯ ತಮ್ಮ ದಾಖಲೆಗಳಲ್ಲಿ ತಿಳಿಸಿದೆ.

ಸಾರ್ವಜನಿಕ ಸಾಲ ₹48 ಲಕ್ಷ ಕೋಟಿ ಇದ್ದದ್ದು ನಾಲ್ಕೂವರೆ ವರ್ಷಗಳಲ್ಲಿ ₹73 ಲಕ್ಷ ಕೋಟಿ ಆಗಿದೆ.ಅಂದರೆ 51.7 ಶೇ ಹೆಚ್ಚಾಗಿದೆ.ಆಂತರಿಕ ಸಾಲದಲ್ಲಿ ಶೇ.54 ಏರಿಕೆ ಆಗಿದ್ದು, ಇದು ₹68 ಲಕ್ಷ ಕೋಟಿ ಇದೆ.
ಇದೇ ಕಾಲಾವಧಿಯಲ್ಲಿ ಮಾರುಕಟ್ಟೆ ಸಾಲದಲ್ಲಿಯೂ ಶೇ. 47.5 ಏರಿಕೆಯಾಗಿದ್ದು ಮೋದಿ ಅಧಿಕಾರವಧಿಯಲ್ಲಿ ಸಾಲದ ಮೊತ್ತ ₹52 ಲಕ್ಷ ಕೋಟಿ ಆಗಿದೆ.ಜೂನ್ 2014ರ ಕೊನೆಯವರೆಗೆ ಚಿನ್ನದ ಬಾಂಡ್ ಮೂಲಕ ಸಾಲ ಏರಿಕೆ ಆಗಿಲ್ಲವಾದರೂ ಚಿನ್ನದ ಹಣಗಳಿಕೆ ಯೋಜನೆ ಸೇರಿದಂತೆ ಸಾಲದ ಮೊತ್ತ ₹9,089 ಕೋಟಿ ಆಗಿದೆ.

ಸರ್ಕಾರದ ಸಾಲದ ಸ್ಥಿತಿ ಬಗ್ಗೆ ಇರುವ ಈ ದಾಖಲೆಯಲ್ಲಿ ಭಾರತ ಸರ್ಕಾರದ ಒಟ್ಟು ಸಾಲದ ವಿಸ್ತೃತ ವಿಶ್ಲೇಷಣೆ ನೀಡಲಾಗಿದೆ.2010-2011ರಿಂದ ಇದೇ ರೀತಿ ಸರ್ಕಾರದ ಸಾಲದ ಬಗ್ಗೆ ಇರುವ ದಾಖಲೆಗಳನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT