ನವದೆಹಲಿ: 2016ರ ಏಪ್ರಿಲ್ ಮುಂಚೆ ಪಡೆದಿರುವ ಹಳೆಯ ಗೃಹ ಸಾಲಗಳು ಈ ಏಪ್ರಿಲ್ 1ರಿಂದ ಅಗ್ಗವಾಗುವ ಸಾಧ್ಯತೆ ಇದೆ.

ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರಕ್ಕೆ (ಎಂಸಿಎಲ್ಆರ್) ಮೂಲ ದರ ಜೋಡಿಸಲು ಭಾರತೀಯ ರಿಸರ್ವ್ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿರುವುದರಿಂದ 2016ರ ಏಪ್ರಿಲ್ ಮುಂಚಿನ ಹಳೆಯ ಗೃಹ ಸಾಲಗಳ ಕಂತಿನ ಪ್ರಮಾಣ ಕಡಿಮೆಯಾಗಲಿದೆ. ಮಾರುಕಟ್ಟೆ ದರಗಳಿಗೆ ತಕ್ಕಂತೆ ಗೃಹ ಸಾಲಗಳನ್ನು ಪರಿಷ್ಕರಿಸದ ಬ್ಯಾಂಕ್‌ಗಳು ಈಗ ಹೊಸ ಬಡ್ಡಿ ದರ ಅನ್ವಯಿಸಬೇಕಾಗಿದೆ.

ಬಡ್ಡಿ ದರ ಕಡಿತ ಮಾಡಿದಾಗಲೆಲ್ಲ ಬ್ಯಾಂಕ್‌ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣಕ್ಕೆ ಆರ್‌ಬಿಐ, 2016ರ ಏಪ್ರಿಲ್1ರಿಂದ ‘ಎಂಸಿಎಲ್‌ಆರ್’ ವ್ಯವಸ್ಥೆ ಜಾರಿಗೆ ತಂದಿತ್ತು. ಇದರಿಂದ ಮೂಲ ದರ ಆಧರಿಸಿ ಮಂಜೂರು ಮಾಡಿದ ಸಾಲಗಳು ‘ಎಂಸಿಎಲ್‌ಆರ್‘ ವ್ಯವಸ್ಥೆಗೆ ಬದಲಾಗಬೇಕಿತ್ತು. ಆದರೆ, ಬ್ಯಾಂಕ್‌ಗಳು ಇದನ್ನು ಪಾಲಿಸಿಲ್ಲ.

2016ರ ಏಪ್ರಿಲ್ ನಂತರದ ಗೃಹ ಸಾಲಗಳಿಗೆ ಮಾತ್ರ ‘ಎಂಸಿಎಲ್ಆರ್’ ಪ್ರಯೋಜನ ದೊರೆಯುತ್ತಿದೆ. ಬ್ಯಾಂಕ್‌ಗಳು ಅದಕ್ಕೂ ಮುಂಚಿನ ಗೃಹ ಸಾಲಗಳಿಗೆ ಏಕಪಕ್ಷೀಯವಾಗಿ ಮೂಲ ದರ ಆಧರಿಸಿಯೇ ಬಡ್ಡಿ ವಸೂಲಿ ಮಾಡುತ್ತಿವೆ. ಇತ್ತೀಚೆಗೆ ‘ಎಂಸಿಎಲ್‌ಆರ್’ ಕಡಿಮೆಯಾಗುತ್ತಿದೆ. ಆದರೆ, ಇದರ ಪ್ರಯೋಜನ ಗ್ರಾಹಕರಿಗೆ ಲಭಿಸುತ್ತಿಲ್ಲ.

ಏಪ್ರಿಲ್ 1 ರಿಂದ ‘ಎಂಸಿಎಲ್‌ಆರ್‘ಗೆ ಮೂಲ ದರ ಜೋಡಿಸಿ ಬಡ್ಡಿ ದರ ನಿರ್ಧರಿಸುವಲ್ಲಿ ಸುಸಂಬದ್ಧತೆ ತರಲು ಉದ್ದೇಶಿಸಲಾಗಿದೆ. ಗಮನಾರ್ಹ ಸಂಖ್ಯೆಯ ಸಾಲದ ಖಾತೆಗಳು ಈಗಲೂ ಮೂಲ ದರ ವ್ಯಾಪ್ತಿಯಲ್ಲಿ ಇವೆ. ಇದು ಬದಲಾಗಬೇಕಾಗಿದೆ ಎಂದು ಆರ್‌ಬಿಐ ಹೇಳಿದೆ.

ಮೂಲ ದರ ವ್ಯವಸ್ಥೆಯಲ್ಲಿ, ಬ್ಯಾಂಕ್‌ಗಳು ಕನಿಷ್ಠ ಬಡ್ಡಿ ದರ ನಿಗದಿಪಡಿಸುವಲ್ಲಿ ತಮ್ಮದೇ ಆದ ವಿಧಾನ ಅನುಸರಿಸುತ್ತಿದ್ದವು. ‘ಎಂಸಿಎಲ್‌ಆರ್’ ವ್ಯವಸ್ಥೆಯಡಿ ಎಲ್ಲ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ ಕನಿಷ್ಠ ಬಡ್ಡಿ ದರ ನಿಗದಿ ಮಾಡಬೇಕಾಗಿದೆ. ಇದರಿಂದ ಈ ಎರಡೂ ಬಡ್ಡಿ ದರ ವ್ಯವಸ್ಥೆಯಲ್ಲಿನ ಅಂತರ ತಗ್ಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.