ಬುಧವಾರ, ಸೆಪ್ಟೆಂಬರ್ 18, 2019
28 °C

ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆಗೆ ಸಿದ್ಧ: ಅಮೆರಿಕದಿಂದ ಮತ್ತೊಮ್ಮೆ ಪ್ರಸ್ತಾವ 

Published:
Updated:

ವಾಷಿಂಗ್ಟನ್‌: ಕಾಶ್ಮೀರದ ವಿಚಾರದಲ್ಲಿ ತಾವು ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಂಗಳವಾರ ಪುನರುಚ್ಚರಿಸಿದ್ದಾರೆ. 

ಇದನ್ನೂ ಓದಿ:ಟ್ರಂಪ್‌ ಮಧ್ಯಸ್ಥಿಕೆಗೆ ಇಮ್ರಾನ್‌ ಒತ್ತಾಯ

'ಮಧ್ಯಸ್ಥಿಕೆಯೊ, ಮತ್ತೊಂದೋ... ಕಾಶ್ಮೀರದ ವಿಚಾರ ಬಗೆಹರಿಸಲು ನನ್ನಿಂದ ಸಾಧ್ಯವಾಗಬಹುದಾದದ್ದನ್ನು ಮಾಡಲು ನಾನು ಸಿದ್ಧ,' ಎಂದು ಟ್ರಂಪ್‌ ಪತ್ರಕರ್ತರಿಗೆ ಹೇಳಿದ್ದಾರೆ. ಅಲ್ಲದೆ, ‘ಹಿಂದೂ ಮತ್ತು ಮುಸ್ಲೀಂ ಎಂಬ ವಿಚಾರಗಳ ನಡುವಿನ ಭಿನ್ನಾಭಿಪ್ರಾಯದ ಫಲವೇ ಕಾಶ್ಮೀರದ ಸಮಸ್ಯೆ,’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ:ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಚೀನಾ ಆಸಕ್ತಿ

"ಕಾಶ್ಮೀರ ಅತ್ಯಂತ ಸಂಕೀರ್ಣ ಪ್ರದೇಶ. ಅಲ್ಲಿ ಹಿಂದೂಗಳಿದ್ದಾರೆ. ಮುಸ್ಲೀಮರೂ ಇದ್ದಾರೆ. ಅವರಿಬ್ಬರೂ ಸಾಮರಸ್ಯದಿಂದ ಇದ್ದಾರೆ ಎಂದು ನಾನು ಹೇಳಲಾರೆ,’ ಎಂದೂ ಅವರೂ ಅನಿಸಿಕೆ ಹೇಳಿದ್ದಾರೆ. 

ಇದನ್ನೂ ಓದಿ: ಮೋದಿ–ಖಾನ್‌ ಜತೆ ಟ್ರಂಪ್‌ ಫೋನ್‌ ಮಾತುಕತೆ: ಕಾಶ್ಮೀರ, ವಾಣಿಜ್ಯ ವ್ಯವಹಾರಗಳ ಚರ್ಚೆ

ಈ ವಾರದ ಕೊನೆಯಲ್ಲಿ ಫ್ರಾನ್ಸ್‌ನ ಬೈರೆಟ್ಸ್‌ನಲ್ಲಿ ನಡೆಯುವ ಜಿ–7  ಶೃಂಗ ಸಭೆಯ ನಡುವೆ ಮೋದಿ ಅವರನ್ನು ಭೇಟಿಯಾಗುವುದಾಗಿಯೂ ಅವರು ತಿಳಿಸಿದ್ದಾರೆ. 

ಇದನ್ನೂ ಓದಿ: ಪಾಕ್‌ ಜತೆಗಷ್ಟೇ ಕಾಶ್ಮೀರ ವಿವಾದ ಚರ್ಚೆ: ಅಮೆರಿಕದ ಮಧ್ಯಸ್ಥಿಕೆ ತಿರಸ್ಕಾರ

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗುತ್ತಲೇ ಭಾರತ–ಪಾಕ್‌ ನಡುವೆ ಎದುರಾಗಿದ್ದ ದ್ವೇಷಮಯ ವಾತಾವರಣ ನಿವಾರಿಸಲು ಮಧ್ಯಸ್ಥಿಕೆಗೆ ಸಿದ್ಧವಿರುವುದಾಗಿ ಟ್ರಂಪ್‌ ಈ ಹಿಂದೆಯೂ ಹೇಳಿದ್ದರು. 

Post Comments (+)