ಗುರುವಾರ , ಜನವರಿ 23, 2020
23 °C

ಗಡಿಯಲ್ಲಿ ಗುಂಡಿನ ಚಕಮಕಿ ಇಬ್ಬರು ಯೋಧರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು : ಜಮ್ಮು ಕಾಶ್ಮೀರದ ರಜೌರಿ ಜಿಲ್ಲಾ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ನುಸುಳುವುದನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 

ನಾಯಕ್‌ ಸಾವಂತ್‌ ಸಂದೀಪ್‌ ರಘುನಾಥ್‌ (29) ಮತ್ತು ಅರ್ಜುನ್‌ ಥಾಪ ಮಾಗರ್‌ (25) ಮೃತ ಯೋಧರು. ಡಿ.31ರ ತಡರಾತ್ರಿ ಘಟನೆ ನಡೆದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮೂಲಕ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಭಾರಿ ಶಸ್ತ್ರಸಜ್ಜಿತ ಪಾಕಿಸ್ತಾನದ ಉಗ್ರರ ಯತ್ನವನ್ನು ಖಾರಿ ತ್ರಾಯತ್‌ ಅರಣ್ಯಪ್ರದೇಶದಲ್ಲಿ ಸೇನೆ ವಿಫಲಗೊಳಿಸಿದೆ. 

ಈ ಪ್ರದೇಶದಲ್ಲಿ ಶಂಕಿತ ಉಗ್ರರಿರುವ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆ ನಡೆಸಿತ್ತು. 

‘ಉಗ್ರರು ಸೇನೆ ಮೇಲೆ ದಾಳಿ ನಡೆಸಿದರು. ದಾಳಿಯಲ್ಲಿ ಯೋಧರು ಗಂಭೀರ ಗಾಯಗೊಂಡಿದ್ದರು. ನಂತರ ಹುತಾತ್ಮರಾದರು.  ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು  ಜಮ್ಮು ಮೂಲದ ಭಾರತೀಯ ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು