ಶುಕ್ರವಾರ, ಫೆಬ್ರವರಿ 21, 2020
29 °C

ಹೆಲ್ಮೆಟ್‌ ಇಲ್ಲದ ಪ್ರಯಾಣಿಕರಿಂದ ಪ್ರಬಂಧ ಬರೆಸುವ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್ (ಮಧ್ಯ ಪ್ರದೇಶ): ಹೆಲ್ಮೆಟ್‌ ಇಲ್ಲದ ಬೈಕ್‌ ಚಲಾಯಿಸಿ ಪೊಲೀಸರ ಅತಿಥಿಯಾದ ಬೈಕ್‌ ಸವಾರರ ಬಳಿ ಹೆಲ್ಮೆಟ್‌ ಬಗ್ಗೆ ಸಣ್ಣ ಪ್ರಬಂಧವನ್ನು ಇಲ್ಲಿನ ಪೊಲೀಸರು ಬರೆಸುತ್ತಿದ್ದಾರೆ.

ತಾನು ಯಾಕೆ ಹೆಲ್ಮೆಟ್‌ ಧರಿಸಲಿಲ್ಲ ಎನ್ನುವ ಬಗ್ಗೆ ಪ್ರಬಂಧ ಬರೆಯಬೇಕಾಗಿದ್ದು ಕಳೆದ ಏಳು ದಿನಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಸುಮಾರು 150ಕ್ಕೂ ಅಧಿಕ ಬೈಕ್‌ ಸವಾರರು ಪ್ರಬಂಧ ಬರೆದಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿಕ್ಕಾಗಿ ಒಂದು ವಾರಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಪ್ರಯುಕ್ತ ಪ್ರಬಂಧ ಬರೆಸುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಪ್ರದೀಪ್ ಚೌದ್ರಿ ಅವರು ಹೇಳಿದ್ದಾರೆ.

ರಸ್ತೆ ಸುರಕ್ಷತೆಯ ಬಗ್ಗೆ ಸರ್ವಜನಿಕರಲ್ಲಿ ಅರಿವು ಮೂಡಿಸಲು ಸಂಚಾರಿ ಪೊಲೀಸರು ರ್‍ಯಾಲಿಗಳನ್ನು ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು