ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರತಿ ಒಂದು ಲಕ್ಷ ಜನರ ಪೈಕಿ 7 ಮಂದಿಗೆ ಕೋವಿಡ್-19: ಆರೋಗ್ಯ ಇಲಾಖೆ ಮಾಹಿತಿ

Last Updated 19 ಮೇ 2020, 2:42 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರ ಪೈಕಿ 7.1 ಮಂದಿಗೆ ಕೋವಿಡ್‌–19 ಸೋಂಕು ಇದೆ. ಇದು ಜಾಗತಿಕ ಅಂಕಿ–ಅಂಶಕ್ಕೆ ಹೋಲಿಸಿದರೆ, ತುಂಬಾ ಕಡಿಮೆ ಪ್ರಮಾಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಸೋಂಕು ಸಂಬಂಧ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ‘ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 7.1ರಷ್ಟುಕೋವಿಡ್‌–19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜಗತ್ತಿನಾದ್ಯಂತ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 60 ಸೋಂಕು ಪ್ರಕರಣಗಳು ಖಚಿತವಾಗಿವೆ. ಆರಂಭದಲ್ಲೇಆಕ್ರಮಣಕಾರಿಯಾಗಿ ಕ್ರಮಗಳನ್ನು ಕೈಗೊಂಡಿದ್ದರ ಫಲಿತಾಂಶ ಈಗ ಪ್ರದರ್ಶನವಾಗುತ್ತಿವೆ’ ಎಂದು ತಿಳಿಸಿದೆ.

ವಿಶ್ವದಾದ್ಯಂತ ಇಲ್ಲಿವರೆಗೆ ಸುಮಾರು 45.25 ಲಕ್ಷ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 60 ಪ್ರಕರಣಗಳು ಇವೆ. ದೇಶದಲ್ಲಿ ಮೇ18ರ ವೇಳೆಗೆ ಸೋಂಕಿತರ ಸಂಖ್ಯೆ 96 ಸಾವಿರ ದಾಟಿದ್ದು, 3,029 ಜನರು ಮೃತಪಟ್ಟಿದ್ದಾರೆ.

‘ದೇಶದಲ್ಲಿ ಸದ್ಯ (ಮೇ18ರ ವರೆಗೆ) 56,316 ಸಕ್ರಿಯ ಪ್ರಕರಣಗಳಿವೆ. 36,824 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 2,715 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರದಿಯಾಗಿವೆ. ಸದ್ಯ ನಾವು ಶೇ.38.29 ರಷ್ಟು ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದ್ದೇವೆ’ ಎಂದೂ ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಒಂದು ಲಕ್ಷ ಸೋಂಕಿತರಿಂದ 7 ದಿನಗಳ ಅವಧಿಯಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳ ಪ್ರಮಾಣ, ಸಾವಿನ ಸಂಖ್ಯೆ, ಪರೀಕ್ಷೆ ಮತ್ತು ದೃಢಪಟ್ಟ ಪ್ರಕರಣಗಳ ಪ್ರಮಾಣದ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ.

ಕೇಂದ್ರ ಸರ್ಕಾರವು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳ ವರ್ಗೀಕರಣಕ್ಕಾಗಿ ರಾಜ್ಯಗಳಿಗೆ ಹೊಸ ಮಾರ್ಗಸೂಚಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ ಜಿಲ್ಲೆಗಳು ಮತ್ತು ಪುರಸಭೆಗಳನ್ನು ವರ್ಗೀಕರಿಸುವಂತೆ ಸೂಚಿಸಲಾಗಿದೆ. ಆಡಳಿತವು ಕ್ಷೇತ್ರ ತಪಾಸಣೆ ನಡೆಸಿರುವುದಕ್ಕೆ ಅನುಗುಣವಾಗಿಯೂ ಯಾವುದೇ ವಾರ್ಡ್‌, ಅಥವಾ ಪ್ರದೇಶವನ್ನು ಕೆಂಪು, ಕಿತ್ತಳೆ ಅಥವಾ ಹಸಿರು ವಲಯವೆಂದು ಖಾತರಿಪಡಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT