ಭಾನುವಾರ, ಜೂಲೈ 12, 2020
29 °C

ಉತ್ತರ ಪ್ರದೇಶ: ಚೀನಾದ 52 ಆ್ಯಪ್‌ಗಳಿಗೆ ನಿಷೇಧ ಹೇರಿದ ಎಸ್‌ಟಿಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಕ್‌ ಟಾಕ್‌ ಆ್ಯಪ್‌

ಲಖನೌ: ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ತನ್ನ ಸಿಬ್ಬಂದಿಗೆ, ಚೀನಾದ 52 ಸಂಶಯಾಸ್ಪದ ಮೊಬೈಲ್‌ ಆ್ಯಪ್‌ಗಳನ್ನು ಬಳಸದಂತೆ ಸೂಚಿಸಿದೆ.

ಇಂತಹ ಆ್ಯಪ್‌ಗಳನ್ನು ಕೂಡಲೇ ಮೊಬೈಲ್‌ ಫೋನ್‌ಗಳಿಂದ ಅನ್‌ಇನ್‌ಸ್ಟಾಲ್‌ ಮಾಡಬೇಕೆಂದು ನಿರ್ದೇಶನ ನೀಡಿದ್ದು, ಕುಟುಂಬ ಸದಸ್ಯರ ಮೊಬೈಲ್‌ಗಳಲ್ಲೂ ಇವುಗಳು ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕೆಂದು ಎಸ್‌ಟಿಎಫ್‌ನ ಇನ್‌ಸ್ಪೆಕ್ಟರ್‌ ಜನರಲ್‌ ಅಮಿತಾಭ್ ಯಶ್‌ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಟಿಕ್–ಟಾಕ್‌, ಯುಸಿ ಬ್ರೌಸರ್‌, ಹಲೋ, ವಿ ಚಾಟ್, ಶೇರ್‌ ಇಟ್‌ ಮೊದಲಾದ ಆ್ಯಪ್‌ಗಳು ಈ ಪಟ್ಟಿಯಲ್ಲಿವೆ.

 ‘ಇಂತಹ ಆ್ಯಪ್‌ಗಳನ್ನು ಬಳಸಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ’ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಈ ಆ್ಯಪ್‌ಗಳನ್ನು ಬಳಸುವುದರಿಂದ ದತ್ತಾಂಶ ಸೋರಿಕೆಯಾಗುವ ಅಪಾಯವಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು