ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದಲ್ಲಿ ‘ಗರ್ಭ ಸಂಸ್ಕಾರ’ 

Last Updated 23 ಫೆಬ್ರುವರಿ 2020, 3:11 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯವು ದೇಶದಲ್ಲೇ ಇದೇ ಮೊದಲ ಬಾರಿಗೆ ಹೊಸ ವಿಷಯವೊಂದರ ಮೇಲೆ ಡಿಪ್ಲೋಮಾ ಪದವಿ ನೀಡಲು ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅಲ್ಲಿ ಗರ್ಭ ಸಂಸ್ಕಾರ ಎಂಬ ಹೊಸ ಕೋರ್ಸ್‌ ಆರಂಭವಾಗಲಿದೆ.

ಈ ಹೊಸ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ತಾಯ್ತನದ ಬಗ್ಗೆ ಬೋಧನೆ ಮಾಡಲಾಗುತ್ತದೆ. ಗರ್ಭಿಣಿಯರು ಯಾವ ಬಟ್ಟೆ ತೊಡಬೇಕು, ಯಾವ ಆಹಾರ ಸೇವಿಸಬೇಕು, ಆಕೆ ಹೇಗೆ ವರ್ತಿಸಬೇಕು, ಫಿಟ್‌ ಆಗಿರಲು ಆಕೆ ಏನು ಮಾಡಬೇಕು, ಯಾವ ರೀತಿಯ ಸಂಗೀತ ಆಕೆಗೆ ಸಹ್ಯ ಎಂಬುದನ್ನು ತಿಳಿಸಲಾಗುತ್ತದೆ. ಇದರ ಮೂಲಕ ಉದ್ಯೋಗವನ್ನು ಸೃಷ್ಟಿ ಮಾಡುವುದು ವಿವಿಯ ಉದ್ದೇಶ.

ಗರ್ಭ ಸಂಸ್ಕಾರದ ಕೋರ್ಸ್‌ಗೆ ಪುರುಷರೂ ಸೇರಬಹುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿಶ್ವ ವಿದ್ಯಾಲಯದ ಕುಲಾಧಿಪತಿಗಳು, ಉತ್ತರ ಪ್ರದೇಶದ ರಾಜ್ಯಪಾಲರೂ ಆಗಿರುವ ಆನಂದಿ ಬೆನ್‌ ಪಟೇಲ್‌ ಅವರ ನಿರ್ದೇಶನದ ಮೇರೆಗೆ ಈ ಕೋರ್ಸ್‌ ಆರಂಭಿಸುತ್ತಿರುವುದಾಗಿ ವಿವಿಯ ವಕ್ತಾರ ದುರ್ಗೇಶ್‌ ಶ್ರಿವಾತ್ಸವ ತಿಳಿಸಿದ್ದಾರೆ.

ಕಳೆದ ವರ್ಷ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಆನಂದಿ ಬೆನ್‌ ಪಟೇಲ್‌ ಅವರು, ಮಹಾಭಾರತದ ಕಥಾ ಪ್ರಸಂಗವೊಂದನ್ನು ವಿವರಿಸಿದ್ದರು. ಅಭಿಮನ್ಯು ತನ್ನ ತಾಯಿಯ ಗರ್ಭದಲ್ಲಿದ್ದೇ ಯುದ್ಧತಂತ್ರಗಳನ್ನು ಕಲಿತ ಬಗ್ಗೆ ಅವರು ವಿವರಣೆ ನೀಡಿದ್ದರು. ಅಲ್ಲದೆ, ಜರ್ಮನಿಯಲ್ಲಿ ಗರ್ಭ ಸಂಸ್ಕಾರದ ಕುರಿತು ಕೋರ್ಸ್‌ ಇರುವುದಾಗಿಯೂ ಅವರು ಹೇಳಿದ್ದರು.

ಈ ಕೋರ್ಸ್‌ ಆರಂಭಿಸಲು ಈಗಾಗಲೇ ಮಾನದಂಡಗಳನ್ನು ರೂಪಿಸಲಾಗಿದೆ. ಗರ್ಭ ಸಂಸ್ಕಾರ ಕೋರ್ಸ್‌ನಲ್ಲಿ 16 ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ ಎಂದು ವಿವಿ ವಕ್ತಾರ ಶ್ರೀವಾತ್ಸವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT