ಭಾನುವಾರ, ಸೆಪ್ಟೆಂಬರ್ 22, 2019
22 °C

ಮೋಡ ಇಲ್ಲದ ಕಾರಣ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ

Published:
Updated:

ಮುಂಬೈ: ಶುಭ್ರವಾದ ಆಕಾಶ, ಮೋಡಗಳೇನೂ ಇಲ್ಲ, ಹಾಗಾಗಿ ನನ್ನ ನಾಯಿಮರಿ ರೋಮಿಯೊ ರೇಡಾರ್ ಸಿಗ್ನಲ್‌ನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು ಎಂದು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್  ಟ್ವೀಟ್ ಮಾಡಿದ್ದಾರೆ.

‘ಬಾಲಾಕೋಟ್ ವಾಯುದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇತ್ತು. ಹಾಗಾಗಿ, ನಮ್ಮ ವಿಮಾನಗಳನ್ನು ಪತ್ತೆ ಮಾಡಲು ಪಾಕಿಸ್ತಾನದ ರೇಡಾರ್‌ಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ’ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಊರ್ಮಿಳಾ ಈ ರೀತಿ  ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: 
ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!​
‘ಮೋಡದ ಮರೆಯಲ್ಲಿ ಬಾಲಾಕೋಟ್‌ ದಾಳಿ’
ಪಾಕ್ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡದ ನೆರವು: ಟ್ರೋಲ್ ಆಯ್ತು ಮೋದಿ ಹೇಳಿಕೆ
 

Post Comments (+)