ವ್ಲಾಡಿಮಿರ್‌ ಪುಟಿನ್ ಭಾರತ ಭೇಟಿ; ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಕಿರಿಕಿರಿ

7
ಎಸ್‌–400 ಟ್ರಯಂಪ್ ಕ್ಷಿಪಣಿ ಖರೀದಿ ಮಾತುಕತೆಗೆ ವಾಷಿಂಗ್ಟನ್ ಆಕ್ಷೇಪ

ವ್ಲಾಡಿಮಿರ್‌ ಪುಟಿನ್ ಭಾರತ ಭೇಟಿ; ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಕಿರಿಕಿರಿ

Published:
Updated:
Deccan Herald

ನವದೆಹಲಿ/ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಭಾರತ ಭೇಟಿಯ ಉದ್ದೇಶವೇ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿ ಪೂರೈಕೆಯ ಗುತ್ತಿಗೆಯನ್ನು ಬಗಲಿಗೆ ಹಾಕಿಕೊಳ್ಳುವುದು. ಆದರೆ, ಇದು ಅಮೆರಿಕ, ಚೀನಾ ಮತ್ತು ಪಾಕಿಸ್ತಾನಕ್ಕೆ ಏಕಕಾಲಕ್ಕೆ ಕಿರಿಕಿರಿ ಉಂಟು ಮಾಡಲಿದೆ.

ಪುಟಿನ್‌ ಅವರ ಭಾರತ ಭೇಟಿಯ ಮುಖ್ಯಾಂಶವೇ ಸುಮಾರು ₹40 ಸಾವಿರ ಕೋಟಿ ಮೌಲ್ಯದ ಎಸ್‌–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿ ಪೂರೈಕೆ ಒಪ್ಪಂದ ಎಂದು ರಷ್ಯಾದ ಹಿರಿಯ ಸಚಿವರು ಈಗಾಗಲೇ ಹೇಳಿದ್ದಾರೆ. ಈ ಸಂಬಂಧ ಎರಡೂ ದೇಶಗಳು ಈ ವಾರ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಸಲುವಾಗಿ ಪುಟಿನ್ ಗುರುವಾರ ಭಾರತಕ್ಕೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ.

ಆದರೆ ಇದರ ಮಧ್ಯೆಯೇ ರಷ್ಯಾದಿಂದ ರಕ್ಷಣಾ ಸಾಮಗ್ರಿ ಖರೀದಿಸಿದರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೆರಿಕವು ಎಚ್ಚರಿಕೆ ನೀಡಿದೆ.

‘ನಮ್ಮ ಎಲ್ಲ ಮಿತ್ರ ರಾಷ್ಟ್ರಗಳಿಗೂ ಇದು ಅನ್ವಯವಾಗಲಿದೆ. ರಷ್ಯಾದಿಂದ ಭಾರತವು ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದರೆ, ಭಾರತವೂ ನಿರ್ಬಂಧಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯ ಕಚೇರಿ ಘೋಷಿಸಿದೆ.

‘ರಷ್ಯಾವು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ. ಹೀಗಾಗಿ ರಷ್ಯಾದೊಂದಿಗೆ ತೈಲ, ವಿದ್ಯುತ್ ಮತ್ತು ರಕ್ಷಣಾ ವ್ಯಾಪಾರ ನಡೆಸಬಾರದು’ ಎಂಬುದು ಅಮೆರಿಕದ ವಾದ.

ಯಾವುದೇ ದೇಶಗಳು ತಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ರಷ್ಯಾಗೆ ಬುದ್ದಿ ಕಲಿಸಬೇಕು. ನಮ್ಮ ಈ ನಿರ್ಬಂಧದಿಂದ ರಷ್ಯಾಗೆ ನಷ್ಟವಾಗಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯ ಕಚೇರಿ ಸ್ಪಷ್ಟಪಡಿಸಿದೆ.

ರಷ್ಯಾದಿಂದ ಎಸ್‌–400 ಕ್ಷಿಪಣಿ ವ್ಯವಸ್ಥೆ ಮತ್ತು ಸುಖೋಯ್ ಯುದ್ಧವಿಮಾನಗಳನ್ನು ಖರೀದಿಸಲು ಚೀನಾವು ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿದೆ. ಚೀನಾ ಮೇಲೂ ಅಮೆರಿಕವು ಆರ್ಥಿಕ ನಿರ್ಬಂಧ ಹೇರಿದೆ.

ಬರಹ ಇಷ್ಟವಾಯಿತೆ?

 • 26

  Happy
 • 1

  Amused
 • 1

  Sad
 • 3

  Frustrated
 • 2

  Angry

Comments:

0 comments

Write the first review for this !