ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಹೆಣ್ಣು ಹೆತ್ತಳೆಂದು ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ ಗಂಡ

Last Updated 3 ಡಿಸೆಂಬರ್ 2019, 18:08 IST
ಅಕ್ಷರ ಗಾತ್ರ

ಬಾಂಡಾ (ಉತ್ತರಪ್ರದೇಶ): ಆರು ಬಾರಿಯೂ ಹೆಣ್ಣುಮಗುವನ್ನೇ ಹೆತ್ತಳು ಎನ್ನುವ ಕಾರಣಕ್ಕಾಗಿ ಗಂಡನೇ ಹೆಂಡತಿ ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ ಘಟನೆ ಉತ್ತರ ಪ್ರದೇಶದ ಬಾಂಡಾ ಗ್ರಾಮದಲ್ಲಿ ನಡೆದಿದೆ.

‘ಹೆಣ್ಣುಮಕ್ಕಳನ್ನು ಹೆತ್ತಿದ್ದಕ್ಕಾಗಿ ಪತಿ ಲಕ್ಷ್ಮಣ್ ನನ್ನನ್ನು ಸೇರಿದಂತೆ ಆರು ಮಕ್ಕಳನ್ನೂ ಮನೆಯಿಂದ ಹೊರಹಾಕಿದ್ದಾನೆ. ಕೊನೆಯ ಮಗಳಿಗೆ ಎರಡು ವರ್ಷ. ಮೊದಲ ಮಗಳಿಗೆ 14 ವರ್ಷ. ಪತಿಯ ಅಣ್ಣ ಚಾಕುವಿನಿಂದ ನನ್ನ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ’ ಎಂದು ದೂರಿ ಷಹಜಹಾನ್ ಎನ್ನುವ ಮಹಿಳೆ ಸೋಮವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.

ಈ ಸಂಬಂಧ ಗಂಡ ಮತ್ತು ಆತನ ಹಿರಿಯ ಸಹೋದರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಸಂಬಂಧಿಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT