ಶನಿವಾರ, ಜುಲೈ 24, 2021
26 °C

ಕಾಲಾಪಾನಿ ಭಾರತದ್ದು: ಶಾಸನ, ಗ್ರಂಥಗಳ ಮೂಲಕ ನೇಪಾಳದ ವಾದ ಅಲ್ಲಗಳೆದ ತಜ್ಞರು

ಪಿಟಿಐ Updated:

ಅಕ್ಷರ ಗಾತ್ರ : | |

ಪಿಥೋರಗಢ್‌(ಉತ್ತರಾಖಂಡ): ಕಾಳಿ ನದಿಯ ಮೂಲ ಕಾಲಾಪಾನಿ ಎನ್ನುವುದಕ್ಕೆ ಸಾಕ್ಷಿಯಾಗಿ ಇರುವ ಶಾಸನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಗ್ರಂಥಗಳನ್ನು ಉತ್ತರಾಖಂಡ ವಿದ್ವಾಂಸರು ಮುಂದಿಟ್ಟಿದ್ದಾರೆ. 

ಕಾಲಾಪಾನಿ, ಲಿಪುಲೇಖ್‌, ಲಿಂಪಿಯಧುರ ಒಳಗೊಂಡ ಪರಿಷ್ಕೃತ ಭೂಪಟಕ್ಕೆ ನೇಪಾಳದ ಸಂಸತ್ತಿನ ಕೆಳಮನೆ ಶನಿವಾರ ಒಪ್ಪಿಗೆ ಸೂಚಿಸಿತ್ತು. ಆದರೆ ಈ ನಡೆಯನ್ನು ವಿರೋಧಿಸಿದ್ದ ಭಾರತ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಪ್ರತಿಕ್ರಿಯೆ ನೀಡಿತ್ತು. ಎರಡೂ ದೇಶಗಳಿಗೆ ಗಡಿಯಾಗಿ ಕಾಳಿ ನದಿಯಿದ್ದು, ಇದರ ಮೂಲ ಕಾಲಾಪಾನಿ ಪ್ರದೇಶವಲ್ಲ ಎಂದು ನೇಪಾಳ ವಾದಿಸಿತ್ತು. ಲಿಂಪಿಯಧುರದಲ್ಲಿ ಹುಟ್ಟುವ ಕುತಿ–ಯಾಂಗ್ತಿ ತೊರೆಯೇ ಕಾಳಿ ನದಿಯ ಮೂಲ ಎಂದು ನೇಪಾಳ ಹೇಳುತ್ತಿದೆ.   

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌.ಎಸ್‌.ಜೀನಾ ಕ್ಯಾಂಪಸ್‌ನ ಇತಿಹಾಸ ಪ್ರಾಧ್ಯಾಪಕರಾದ ವಿ.ಡಿ.ಎಸ್‌.ನೇಗಿ, ಕಾಳಿ ನದಿಯ ಉಲ್ಲೇಖವಿರುವ ಸ್ಕಂದ ಪುರಾಣದ ಮಾನಸ ಖಂಡವನ್ನು ಸಾಕ್ಷಿಯಾಗಿ ಮುಂದಿಟ್ಟಿದ್ದಾರೆ. ‘ಮಾನಸ ಖಂಡದಲ್ಲಿರುವ ಶ್ಲೋಕವೊಂದರ ಪ್ರಕಾರ ಕಾಳಿ ನದಿಯ ಮೂಲ ಲಿಪುಲೇಖ್‌ ಪರ್ವತಶ್ರೇಣಿ. ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಟಿಬೆಟ್‌ಗೆ ಭೇಟಿ ನೀಡಿದ್ದ ಬ್ರಿಟಿಷ್‌ ಪ್ರವಾಸಿಗರು ಹಾಗೂ ಕೈಲಾಸ–ಮಾನಸಸರೋವರದ ಬಗ್ಗೆ ಬರೆದಿರುವ ಭಾರತದ ವಿದ್ವಾಂಸರು ಕಾಳಿ ನದಿಯ ಮೂಲ ಕಾಲಾಪಾನಿ ಎಂದು ಉಲ್ಲೇಖಿಸಿದ್ದಾರೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು