ಈಗ ಮಮತಾ ಬ್ಯಾನರ್ಜಿ ಮಾತ್ರ ಮಹಿಳಾ ಮುಖ್ಯಮಂತ್ರಿ

7

ಈಗ ಮಮತಾ ಬ್ಯಾನರ್ಜಿ ಮಾತ್ರ ಮಹಿಳಾ ಮುಖ್ಯಮಂತ್ರಿ

Published:
Updated:
Deccan Herald

ನವದೆಹಲಿ: ದೇಶದಲ್ಲಿ ಈಗ ಮಹಿಳಾ ಮುಖ್ಯಮಂತ್ರಿಗಳ ಸಂಖ್ಯೆ ಒಂದು ಮಾತ್ರ. ಈ ವರ್ಷದ ಆರಂಭದಲ್ಲಿ ಮೂರರಷ್ಟಿದ್ದ ಈ ಸಂಖ್ಯೆ, ವರ್ಷಾಂತ್ಯದ ವೇಳೆಗೆ ಒಂದಕ್ಕೆ ಇಳಿದಿದೆ.

2018ರ ಆರಂಭದಲ್ಲಿ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ವಸುಂಧರಾ ರಾಜೇ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರದ ಚುಕ್ಕಾಣಿ ಹಿಡಿದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಇದೇ ಜೂನ್‌ನಲ್ಲಿ ಬಿಜೆಪಿ ವಾಪಸ್ ಪಡೆಯಿತು. ಹೀಗಾಗಿ ಮುಫ್ತಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೇ ಡಿಸೆಂಬರ್‌ನಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುಕಂಡಿತು. ಹೀಗಾಗಿ ರಾಜೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನು ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !