ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ಮಂತ್ರಿ ವಯ ವಂದನ ಯೋಜನೆ ವಿಸ್ತರಣೆ: ಬಡ್ಡಿ ಇಳಿಕೆ

Last Updated 21 ಮೇ 2020, 3:35 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗಾಗಿರೂಪಿಸಿದ್ದ ಪ್ರಧಾನ ಮಂತ್ರಿವಯ ವಂದನ (ಪಿಎಂವಿವಿವೈ) ಯೋಜನೆಯನ್ನು ಮಾರ್ಚ್ 31, 2023ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಆದರೆ ಬಡ್ಡಿದರವನ್ನು ಶೇ 8ರಿಂದ ಶೇ 7.4ಕ್ಕೆ ಇಳಿಕೆ ಮಾಡಲಾಗಿದೆ.

2020-21ರ ಆರ್ಥಿಕ ಸಾಲಿಗೆ ಸರ್ಕಾರವು ಶೇ 7.40 ಬಡ್ಡಿದರದ ಖಾತ್ರಿ ಕೊಡುತ್ತದೆ. ನಂತರ ಪ್ರತಿ ವರ್ಷ ಬಡ್ಡಿದರವನ್ನು ಆರ್ಥಿಕ ವಿದ್ಯಮಾನಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಷ್ಕರಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

2018-19ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಶೇ 8ರ ಬಡ್ಡಿದರದಂತೆಮಾರ್ಚ್ 2020ರ ವರೆಗೆ ಯೋಜನೆಯನ್ನು ವಿಸ್ತರಿಸಿತ್ತು. ಹಿರಿಯ ನಾಗರಿಕರ ಹೂಡಿಕೆ ಮಿತಿಯನ್ನು 15 ಲಕ್ಷ ರೂಪಾಯಿಗೆ ನಿಗದಿಪಡಿಸಿತ್ತು.

ನಿವೃತ್ತರು ಮತ್ತು ವೃದ್ಧರಿಗಾಗಿ ರೂಪಿಸಿರುವ ಈ ವಿಶೇಷ ಯೋಜನೆಯನ್ನು ಕೇಂದ್ರ ಹಣಕಾಸು ಇಲಾಖೆಯು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೂಲಕ ಜಾರಿ ಮಾಡುತ್ತಿದೆ. 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಮಾತ್ರ ಯೋಜನೆಯಡಿ ಹೂಡಿಕೆಗೆ ಅವಕಾಶವಿದೆ. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಅಂತರದಲ್ಲಿ ಬಡ್ಡಿ ಪಡೆದುಕೊಳ್ಳುವ ಆಯ್ಕೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT