ಮಂಗಳವಾರ, ಜನವರಿ 21, 2020
25 °C

ಪಶುವೈದ್ಯೆಗೆ ಕೊನೆಗೂ ನ್ಯಾಯ ಸಿಕ್ಕಿದೆ: ಎನ್‌ಕೌಂಟರ್‌ಗೆ ಟಾಲಿವುಡ್‌ ನಿಟ್ಟುಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ತೆಲಂಗಾಣ ಪಶುವೈದ್ಯೆ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವುದಕ್ಕೆ ಟಾಲಿವುಡ್‌ ನಟ, ನಟಿಯರಿಂದ ಶ್ಲಾಘನೆ ವ್ಯಕ್ತವಾಗಿದ್ದು, ‘ತಪ್ಪು ಮಾಡಿದವರಿಗೆ ನಿಜಕ್ಕೂ ಶಿಕ್ಷೆಯಾಗಿದೆ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಎನ್‌ಕೌಂಟರ್ ಕುರಿತು ಟ್ವೀಟ್‌ ಮಾಡಿರುವ ನಟಿ ಸಮಂತಾ ಅಕ್ಕಿನೇನಿ, ‘ಐ ಲವ್‌ ತೆಲಂಗಾಣ. ಭಯ ಎನ್ನುವುದು ಉತ್ತಮ ಪರಿಹಾರ ಮತ್ತು ಕೆಲವೊಮ್ಮೆ ಅದೊಂದೇ ಪರಿಹಾರವಾಗಿರುತ್ತದೆ’ ಎಂದು ಹೇಳಿದ್ದಾರೆ. ಒಂದು ಸಾವಿರ ಮಂದಿ ಇದನ್ನು ರಿಟ್ವೀಟ್‌ ಮಾಡಿದ್ದು, 6 ಸಾವಿರ ಮಂದಿ ಪೊಲೀಸರ ಕೆಲಸಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ನಟ ಅಲ್ಲು ಅರ್ಜುನ್‌ ಟ್ವೀಟ್‌ ಮಾಡಿ, ‘ನ್ಯಾಯ ದೊರೆಯಿತು’ ಎಂದಿದ್ದಾರೆ.

ದಾನಿಶ್ ಸೇಠ್, ‘ಹೈದರಾಬದ್‌ನಲ್ಲಿ ನಡೆದ ಈ ಎನ್‌ಕೌಂಟರ್‌ ತೀಕ್ಷ್ಣವಾದ ಅಭಿಪ್ರಾಯಗಳನ್ನು ಹುಟ್ಟಿಸುತ್ತಿದೆ. ನಿಜಕ್ಕೂ ಬುಲೆಟ್‌ಗಳು ದುಪ್ಪಟ್ಟು ಪರಿಣಾಮವನ್ನು ಬೀರುತ್ತವೆ ಎಂದುಕೊಂಡಿದ್ದಾನೆ. ಗನ್ನಿನ ಶಬ್ದ ನ್ಯಾಯಾಂಗ ವ್ಯವಸ್ಥೆಗೆ ಎಚ್ಚರಿಕೆ ಗಂಟೆಯಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದೇನೆ... ಎದ್ದೇಳಿ!’ ಎಂದು ಟ್ವೀಟ್‌ ಮಾಡಿದ್ದಾರೆ.

 

ಅನುಪಮ್‌ ಖೇರ್‌, ‘ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ತೆಲಂಗಾಣ ಪೊಲೀಸರಿಗೆ ಅಭಿನಂದನೆಗಳು ಮತ್ತು ಜೈಹೊ’ ಎಂದು ಟ್ವೀಟ್‌ ಮಾಡಿದ್ದಾರೆ.

 

‘ಅತ್ಯಾಚಾರದಂತಹ ಅಪರಾಧ ಮಾಡಿ ಎಷ್ಟು ದೂರ ಓಡಿ ಹೋಗಲು ಸಾಧ್ಯ’ ಎಂದು ನಟಿ ರಾಕುಲ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ನಟ ಜಗ್ಗೇಶ್‌ ಸಹ ಎನ್‌ಕೌಂಟರ್‌ ಕುರಿತು ಟ್ವೀಟ್‌ ಮಾಡಿದ್ದು, ‘ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು