ಸೋಮವಾರ, ಫೆಬ್ರವರಿ 24, 2020
19 °C

'ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ' ಹಾಡಿನ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜೊ ನ ಬೋಲೆ ಜೈ ಶ್ರೀರಾಮ್, ಭೇಜ್ ದೊ ಉಸ್‌ಕೊ ಕಬರಿಸ್ತಾನ್ ( ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ) ಎಂಬ ಹಾಡಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಹಾಡಿನ ಬಗ್ಗೆ ಟೀಕೆ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ ರಾಜಕೀಯ ವಿಶ್ಲೇಷಕ ತಹಸೀನ್ ಪೂನವಲ್ಲಾ, ಡಿಯರ್ ದೆಹಲಿ ಪೊಲೀಸ್, ಈ ವಿಡಿಯೊ ಮಾಡಿದವರ ವಿರುದ್ಧ ಐಪಿಸಿ 153(ಎ) ಮತ್ತು 295 (1) ಅಡಿಯಲ್ಲಿ ದೂರು ದಾಖಲಿಸಿ. ದೇಶದ ಪ್ರಜೆಗಳ ವಿರುದ್ಧ ದ್ವೇಷ ಹರಡಲು ಇದು ಪ್ರಚೋದಿಸುತ್ತದೆ. ನೀವು ಕ್ರಮ ತೆಗೆದುಕೊಳ್ಳಲು ವಿಫಲರಾದರೆ ನಾನು ಸುಪ್ರೀಂಕೋರ್ಟ್ ಸಮೀಸುತ್ತೇನೆ ಎಂದಿದ್ದಾರೆ.


ಈ ಬಗ್ಗೆ ಇನ್ನೊಂದು ಟ್ವೀಟ್ ಮಾಡಿದ ತೆಹಸೀನ್, ನೀವು (ದೆಹಲಿ ಪೊಲೀಸ್) ಈ ವಿಡಿಯೊ ಮಾಡಿದವರ ವಿರುದ್ದ ಎಫ್‌ಐಆರ್ ದಾಖಲಿಸದೇ ಇದ್ದರೆ, ನಾನು ತೆಹಸೀನ್ ಪೂನವಲ್ಲಾ ಈ ವಿಡಿಯೊವನ್ನು ನರೇಂದ್ರ ಮೋದಿಯವರ ಮನೆಯ ಹೊರಗೆ ಪ್ಲೇ ಮಾಡಿ ಪ್ರತಿಭಟಿಸುತ್ತೇನೆ ಎಂದಿದ್ದಾರೆ.

 ಈ ವಿಡಿಯೊ ಹೇಯ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಮುಸ್ಲಿಂ ವಿರೋಧಿ ಎಂದು ಟ್ವೀಟಿಸಿದ್ದಾರೆ.
 

 

ಇದನ್ನೂ ಓದಿ:  'ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು