'ಐಶ್ವರ್ಯಾ ಮೀಮ್'- ಕ್ಷಮೆಯಾಚಿಸಿ ಟ್ವೀಟ್ ಡಿಲೀಟ್ ಮಾಡಿದ ವಿವೇಕ್ ಒಬೆರಾಯ್ 

ಮಂಗಳವಾರ, ಜೂನ್ 18, 2019
28 °C

'ಐಶ್ವರ್ಯಾ ಮೀಮ್'- ಕ್ಷಮೆಯಾಚಿಸಿ ಟ್ವೀಟ್ ಡಿಲೀಟ್ ಮಾಡಿದ ವಿವೇಕ್ ಒಬೆರಾಯ್ 

Published:
Updated:

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಜೀವನವನ್ನು ಬಿಂಬಿಸುವ ಮೀಮ್ ಶೇರ್ ಮಾಡಿದ್ದ ನಟ ವಿವೇಕ್ ಒಬೆರಾಯ್ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಎಕ್ಸಿಟ್ ಪೋಲ್ ಬಗ್ಗೆ ಈ ಮೀಮ್ ಬಳಸಿ ವಿವೇಕ್ ಒಬೆರಾಯ್ ಸೋಮವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ ಮಂಗಳವಾರ ಬೆಳಗ್ಗೆ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೋರಿದ್ದಾರೆ. 

ನನ್ನ ಮೀಮ್ ಯಾವುದಾದರೂ ಮಹಿಳೆಯ  ಬಗ್ಗೆ ಆಕ್ಷೇಪಾರ್ಹವಾಗಿದ್ದರೆ ಅದನ್ನು ಪರಿಹರಿಸಬೇಕಾಗಿದೆ,  ಕ್ಷಮೆ ಇರಲಿ, ಟ್ವೀಟ್ ಡಿಲೀಟ್ ಮಾಡುತ್ತೇನೆ ಎಂದು ವಿವೇಕ್ ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಇನ್ನೊಂದು ಟ್ವೀಟ್ ಮಾಡಿದ ಅವರು ನಮಗೆ ತಮಾಷೆಯಾಗಿ ಕಾಣುವುದು ಇನ್ನೊಬ್ಬರಿಗೆ ತಮಾಷೆಯಾಗಿ ಕಾಣಬೇಕಿಂದಿಲ್ಲ. ನಾನು ಕಳೆದ 10 ವರ್ಷಗಳಿಂದ  2000ಕ್ಕಿಂತಲೂ ಹೆಚ್ಚು ಹುಡುಗಿಯರ ಶ್ರೇಯಾಭಿವೃದ್ಧಿಗಾಗಿ ಸಮಯ ವ್ಯಯಿಸಿದ್ದೇನೆ. ಮಹಿಳೆಯೊಬ್ಬರಿಗೆ ಅಗೌರವ ತೋರುವುದು ನನ್ನಿಂದ ಚಿಂತಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.

ವಿವೇಕ್  ಸೋಮವಾರ ಟ್ವೀಟಿಸಿದ ಟ್ವೀಟ್ ಬಗ್ಗೆ ಕ್ಷಮೆ ಕೇಳಬೇಕೆಂದು ನೆಟಿಜನ್‌ಗಳು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ವಿವೇಕ್ ಕ್ಷಮೆ ಕೇಳುವುದಕ್ಕೆ ನನ್ನದೇನೂ ತಕರಾರು ಇಲ್ಲ. ಆದರೆ ನಾನು ಯಾವ ತಪ್ಪು ಮಾಡಿದ್ದೇವೆ ಎಂದು ಹೇಳಿ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳುವೆ, ನಾನು ತಪ್ಪು ಮಾಡಿದ್ದೇನೆ ಎಂದು ಅನಿಸುತ್ತಿಲ್ಲ. ಜನರೇ ಇದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ನಾನೊಂದು ತಮಾಷೆಗೆ ನಕ್ಕಿದ್ದೇನೆ. ಟ್ರೋಲ್ ಮಾಡಿದ ವ್ಯಕ್ತಿಯ ಕಲಾತ್ಮಕತೆಗೆ ಅಭಿನಂದನೆ ಹೇಳಿದ್ದೇನೆ. ಆ ಮೀಮ್‌ನಲ್ಲಿರುವ ವ್ಯಕ್ತಿಗಳಿಗೆ ಈ ಬಗ್ಗೆ ಆಕ್ಷೇಪವಿಲ್ಲ, ಬಾಕಿದ್ದವರಿಗೆ ಮಾತ್ರ ಆಕ್ಷೇಪ ಎಂದಿದ್ದರು.

ಇದನ್ನೂ ಓದಿ : 'ಐಶ್ವರ್ಯಾ ರೈ ಮೀಮ್' ಬಳಸಿ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟಿಸಿದ ವಿವೇಕ್ ಒಬೆರಾಯ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 1

  Frustrated
 • 11

  Angry

Comments:

0 comments

Write the first review for this !