ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಬಂದ್: ವೈರಲ್ ಆಯ್ತು ತಮಿಳುನಾಡು ಪೊಲೀಸ್ ಸಿಂಗಂ ಸ್ಟೈಲ್ ಡೈಲಾಗ್

ಕೆಎಸ್‌ಆರ್‌ಟಿಸಿ ಬಸ್ ಮೇಲಿನ ದಾಳಿ ತಡೆದ ಪೊಲೀಸ್‌ಗೆ ಬಹುಮಾನ
Last Updated 5 ಜನವರಿ 2019, 10:11 IST
ಅಕ್ಷರ ಗಾತ್ರ

ತಿರುವನಂತಪುರ:ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಕೇರಳದಲ್ಲಿ ನಡೆದ ಬಂದ್ ವೇಳೆ ಮೋಹನ್ ಅಯ್ಯರ್ ಎಂಬತಮಿಳುನಾಡಿನ ಪೊಲೀಸ್ಕೆಎಸ್‌ಆರ್‌ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್‌ ಮೇಲಿನ ದಾಳಿ ತಡೆದ ವಿಡಿಯೊ ವೈರಲ್ ಆಗಿದೆ. ಕೇರಳ–ತಮಿಳುನಾಡು ಗಡಿ ಪ್ರದೇಶವಾದ ಕಳಿಯಕ್ಕಾವಿಳೈ ಎಂಬಲ್ಲಿ ಸಿಂಗಂ ಸ್ಟೈಲ್‌ನಲ್ಲಿ ಘರ್ಜಿಸಿ ಬಸ್‌ ಮೇಲಿನ ದಾಳಿ ತಡೆದ ಮೋಹನ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಡೆದಿದ್ದೇನು?:ಬಂದ್ ದಿನವಾದ ಗುರುವಾರ ಕಳಿಯಕ್ಕಾವಿಳೈನಲ್ಲಿ ಪ್ರತಿಭಟನಾಕಾರರು ಬಸ್‌ಗೆ ಹಾನಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೋಪಗೊಂಡ ಮೋಹನ್, ‘ಬನ್ನಿ, ಬಸ್‌ ಅನ್ನು ಮುಟ್ಟಿ. ನಿಮಗೆ ತಾಕತ್ತಿದ್ದರೆ ಮುಂದೆ ಬಂದು ಬಸ್‌ ಅನ್ನು ಸ್ಪರ್ಶಿಸಿ (ವಂಡಿಯೆ ತೊಟ್ಟುಡಿವಿಯ.ತೊಡು ಪಾಪ್ಪೊಂ. ಆಂಬ್ಳೆಯಾಇರುಂದಾತೊಡು ಪಾಪ್ಪೊಂ)’ ಎಂದು ಸಿಂಗಂ ಸ್ಟೈಲ್‌ನಲ್ಲಿ ಘರ್ಜಿಸಿದ್ದಾರೆ. ಮೋಹನ್ ಘರ್ಜನೆ ಕೇಳಿಹೆದರಿದಪ್ರತಿಭಟನಾಕಾರರು ಮೆಲ್ಲನೆ ಹಿಂದೆ ಸರಿದಿದ್ದಾರೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಟಾಮಿನ್ ಜೆ ತಾಚಂಕಾರಿ ದೂರವಾಣಿ ಮೂಲಕ ಮೋಹನ್ ಜತೆ ಮಾತನಾಡಿದ್ದು, ವೃತ್ತಿಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ.

ಕೇರಳ ಬಂದ್ ದಿನ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರತಿಭಟನಾಕಾರರು ಹಾನಿ ಎಸಗಿದ್ದಾರೆ.ಕೆಎಸ್‌ಆರ್‌ಟಿಸಿ ಮೂಲಗಳ ಪ್ರಕಾರ, ಬಂದ್‌ ದಿನ ನಿಗಮಕ್ಕೆ ₹3.5 ಕೋಟಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT