ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿಯ ಲಾಭವಾಗಿದ್ದು ಯಾರಿಗೆ: ರಾಹುಲ್‌ ಪ್ರಶ್ನೆ

Last Updated 14 ಫೆಬ್ರುವರಿ 2020, 9:04 IST
ಅಕ್ಷರ ಗಾತ್ರ

ನವದೆಹಲಿ: ವರ್ಷದ ಹಿಂದೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಬಾಂಬ್‌ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್‌ ಯೋಧರಿಗೆ ಅತ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಶ್ರದ್ಧಾಂಜಲಿ ಸಲ್ಲಿಸುತ್ತಿರುವಾಗಲೇ ಇತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಟ್ವೀಟ್‌ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಪುಲ್ವಾಮ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಯಿತು’ಎಂದು ಅವರು ಪ್ರಶ್ನಿಸಿದ್ದಾರೆ.

‘ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಯೋಧರನ್ನು ಇಂದು ಸ್ಮರಿಸುತ್ತಿರುವ ನಾವು ಈ ಪ್ರಶ್ನೆಗಳನ್ನು ಕೇಳೋಣ’

1. ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?

2. ದಾಳಿಗೆ ಸಂಬಂಧಿಸಿದ ತನಿಖೆಯಿಂದ ಅಂತಿಮವಾಗಿ ತಿಳಿದಿದ್ದು ಏನು?

3. ದಾಳಿಗೆ ಕಾರಣವಾದ ಭದ್ರತಾವೈಫಲ್ಯಕ್ಕೆ ಬಿಜೆಪಿ ಸರ್ಕಾರದಲ್ಲಿ ಇದು ವರೆಗೆ ಯಾರು ಹೊಣೆ ಹೊತ್ತಿದ್ದಾರೆ? ಎಂದು ಅವರು ಮೂರು ಪ್ರಶ್ನೆಗಳನ್ನು ಹಾಕಿದ್ದಾರೆ.

ರಾಹುಲ್‌ ಗಾಂಧಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ರಾಹುಲ್‌ ಗಾಂಧಿ ಅವರು ಲಷ್ಕರ್‌ ಏ ತೋಯ್ಬ, ಜೈಷ್‌ ಏ ಮೊಹಮದ್‌ ಸಂಘಟನೆಯ ಬೆಂಬಲಿಗ ಎಂಬುದು ಗೊತ್ತಿರುವ ವಿಷಯ. ಈ ಟೀಕೆ ಕೇವಲ ಸರ್ಕಾರದ ವಿರುದ್ಧದ್ದಲ್ಲ. ಬದಲಾಗಿ ನಮ್ಮ ರಕ್ಷಣಾ ಪಡೆಗಳ ವಿರುದ್ಧ ಮಾಡಿದ ಟೀಕೆ. ಈ ಹೇಳಿಕೆಗಳು ವಿಶ್ವ ವೇದಿಕೆಯಲ್ಲಿ ಭಾರತವನ್ನು ಟೀಕಿಸಲು ಪಾಕಿಸ್ತಾನಕ್ಕೆ ಅಸ್ತ್ರ ಕೊಟ್ಟಂತೆ' ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT