ಕಾರಿನಿಂದ ಹೊರಗೆಳೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

7

ಕಾರಿನಿಂದ ಹೊರಗೆಳೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Published:
Updated:

ಲುಧಿಯಾನ: ಲುಧಿಯಾನದಿಂದ 15 ಕಿಮೀ ದೂರದಲ್ಲಿರುವ ಸಿದ್ವಾನ್ ಕಣಿವೆಯ ದಡದಲ್ಲಿರುವ ಇಸ್ಸೇವಲ್ ಗ್ರಾಮದಲ್ಲಿ 10 ಮಂದಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 21ರ ಹರೆಯದ ಯುವತಿಯೊಬ್ಬರು ದೂರು ನೀಡಿದ್ದಾರೆ.

ತಮ್ಮ ಗೆಳೆಯನೊಂದಿಗೆ ಶನಿವಾರ ರಾತ್ರಿ ಲುಧಿಯಾನದಿಂದ ಇಸ್ಸೇವಾಲ್ ಗ್ರಾಮಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೂರು ಬೈಕ್‍ಗಳಲ್ಲಿ ಬಂದ ದುಷ್ಕರ್ಮಿಗಳು ಜಾಗ್ರನ್ ಎಂಬಲ್ಲಿ ಕಾರಿಗೆ ತಡೆಯೊಡ್ಡಿದ್ದಾರೆ. ಈ ಬೈಕ್ ಸವಾರರು ಕಾರನ್ನು ಹಿಂಬಾಲಿಸುತ್ತಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ತರುಣ್ ರತ್ತನ್ ಹೇಳಿದ್ದಾರೆ.

ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಲ್ಲು ಮತ್ತು ಇಟ್ಟಿಗೆಯಿಂದ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದ ಮಹಿಳೆಯನ್ನು ಹೊರಗೆಳೆದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಕಣಿವೆಯ ದಡದಲ್ಲಿ ಏಳಕ್ಕಿಂತ ಹೆಚ್ಚು ಮಂದಿ ಈಕೆಯ  ಮೇಲೆ ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಮತ್ತು ಆಕೆಯ ಗೆಳೆಯನ್ನು ಭಾನುವಾರದವರೆಗೆ ವಶದಲ್ಲಿರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಿವಿಲ್ ಹಾಸ್ಪಿಟಲ್ ವೈದ್ಯರು ದೃಢೀಕರಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 4

  Sad
 • 1

  Frustrated
 • 15

  Angry

Comments:

0 comments

Write the first review for this !