ಬುಧವಾರ, ಜನವರಿ 22, 2020
18 °C

ಮಂಗಳೂರು: ಕಾರಿನ ಗಾಜು ಒಡೆದು, ₹ 15 ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಒಡೆದು, ಕಾರಿನೊಳಗಿಡಲಾಗಿದ್ದ ₹15 ಲಕ್ಷ ಕಳವು ಮಾಡಲಾಗಿದೆ.

ನಗರದ ಚಿಲಂಬಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಹಣದ ವಾರಸುದಾರರು ಹಣದೊಂದಿಗೆ ಸೌತ್ ಇಂಡಿಯಾ ಬ್ಯಾಂಕ್‌ಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಕೆಎ 03 ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಕಾರಿನಲ್ಲಿ ಹಣ ಇರಿಸಲಾಗಿತ್ತು. ಹೆಲ್ಮೆಟ್‌ ಧರಿಸಿದ್ದ‌ ಇಬ್ಬರು ಬೈಕಿನಲ್ಲಿ ಬಂದು, ಕಾರಿನ ಗಾಜು ಒಡೆದು ಕಳವು ಮಾಡಿದ್ದಾರೆ. ಈ ಕೃತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು, ಬರ್ಕೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು