ಗುರುವಾರ , ಸೆಪ್ಟೆಂಬರ್ 23, 2021
28 °C

ತರಕಾರಿ ಬೆಳೆಗಾರರಿಗೆ ₹ 137 ಕೋಟಿ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ₹ 137 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

50,083 ಹೆಕ್ಟೇರ್‌ನಲ್ಲಿ ತರಕಾರಿ ಹಾಗೂ 41,054 ಹೆಕ್ಟೇರ್‌ನಲ್ಲಿ ಹಣ್ಣು ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ ₹ 15 ಸಾವಿರದಂತೆ ಪರಿಹಾರ ಸಿಗಲಿದೆ.

ಬಾಳೆ, ಪಪ್ಪಾಯ, ಟೇಬಲ್‌ ದಾಕ್ಷಿ, ಅಂಜೂರ, ಅನಾನಸ್‌, ಕಲ್ಲಂಗಡಿ, ಕರಬೂಜ, ಬೋರೆ, ಬೆಣ್ಣೆಹಣ್ಣು ಬೆಳೆಗಾರರಿಗೆ ಹಾಗೂ ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್‌, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪು, ಹೀರೆಕಾಯಿ, ತೊಂಡೆಕಾಯಿ ಬೆಳೆದ ರೈತರಿಗೆ ಈ ಪರಿಹಾರ ಸಿಗಲಿದೆ.

ವಿದ್ಯುತ್ ಮಗ್ಗಕ್ಕೆ ₹ 25 ಕೋಟಿ: ಈ ಹಿಂದೆ ಪರಿಹಾರ ಘೋಷಿಸುವಾಗ ಕೈಮಗ್ಗ ನೇಕಾರರಿಗೆ ತಲಾ ₹ 2 ಸಾವಿರದಂತೆ ನೀಡಲು ನಿರ್ಧರಿಸಲಾಗಿತ್ತು. ಅದನ್ನು 1.25 ಲಕ್ಷ ವಿದ್ಯುತ್ ಚಾಲಿತ ಘಟಕಗಳ ಎಲ್ಲ ಕೂಲಿ ಕಾರ್ಮಿಕರಿಗೆ ವಿಸ್ತರಿಸಿದ್ದು, ಇದಕ್ಕಾಗಿ ₹ 25 ಕೋಟಿ ನೀಡಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು