ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಐಪಿಎಸ್ ಅಧಿಕಾರಿಗಳ ವರ್ಗ

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ
Last Updated 21 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 32 ಐಪಿಎಸ್ ಅಧಿಕಾರಿಗಳನ್ನು ಏಕಕಾಲದಲ್ಲಿ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.

ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್‌ ಪೊಲೀಸರು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯ ಗುಪ್ತದಳದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಕೇಂದ್ರ ವಿಭಾಗದ ಐಜಿಪಿ ಬಿ. ದಯಾನಂದ್ ಅವರನ್ನು ಬಡ್ತಿ ನೀಡುವ ಮೂಲಕ ನೇಮಕ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ನಾಲ್ಕು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದ ಕೆ.ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆ ನೀಡಿಲ್ಲ.

ವರ್ಗಾವಣೆಯಾದವರು: ಅಮೃತ್‌ ಪಾಲ್– ಐಜಿಪಿ, ಪೂರ್ವ ವಲಯ; ಕೆ.ವಿ.ಶರತ್‍ಚಂದ್ರ– ಐಜಿಪಿ, ಕೇಂದ್ರ ವಿಭಾಗ; ವಿಪುಲ್‌ಕುಮಾರ್– ಐಜಿಪಿ, ದಕ್ಷಿಣ ವಲಯ; ಎಂ.ನಂಜುಂಡಸ್ವಾಮಿ– ಐಜಿಪಿ, ಬಳ್ಳಾರಿ ವಲಯ; ಎಚ್.ಎಸ್.ರೇವಣ್ಣ – ಐಜಿಪಿ, ಬೆಂಗಳೂರು ಬಂದಿಖಾನೆ; ರಾಘವೇಂದ್ರ ಸುಹಾಸ್ – ಐಜಿಪಿ, ಉತ್ತರ ವಲಯ; ಎ.ಸುಬ್ರಹ್ಮಣ್ಯೇಶ್ವರರಾವ್ – ಡಿಐಜಿಪಿ, ಬೆಂಗಳೂರು ಗುಪ್ತದಳ.

ಟಿ.ಆರ್.ಸುರೇಶ್ – ಡಿಐಜಿ, ಬೆಂಗಳೂರು ಕೇಂದ್ರ ಸಶಸ್ತ್ರ ಮೀಸಲು ಪಡೆ; ಸಂದೀಪ್ ಪಾಟೀಲ – ಪೊಲೀಸ್ ಕಮಿಷನರ್, ಮಂಗಳೂರು; ಪಿ.ಎಸ್.ಹರ್ಷ – ನಿರ್ದೇಶಕ, ಕೆಎಸ್‌ಆರ್‌ಟಿಸಿ ಭದ್ರತೆ ಮತ್ತು ಜಾಗೃತ ವಿಭಾಗ; ವಿಕಾಸ್‍ಕುಮಾರ್ ವಿಕಾಸ್ – ಡಿಐಜಿ, ನಕ್ಸಲ್ ನಿಗ್ರಹ ಪಡೆ; ಬಿ.ಎಸ್. ಲೋಕೇಶ್‍ ಕುಮಾರ್– ಪೊಲೀಸ್ ಕಮಿಷನರ್,ಬೆಳಗಾವಿ; ಪಿ.ರಾಜೇಂದ್ರ ಪ್ರಸಾದ್ – ಡಿಐಜಿಪಿ,ಬೆಂಗಳೂರು ನೇಮಕಾತಿ ವಿಭಾಗ; ಚೇತನ್‍ಸಿಂಗ್ ರಾಥೋಡ್ – ನಿರ್ದೇಶಕ,ಬೆಂಗಳೂರು ವಿಧಿ-ವಿಜ್ಞಾನ ಪ್ರಯೋಗಾಲಯ;ಎಲ್.ಶಶಿಕುಮಾರ್ –ಡಿಸಿಪಿ, ಬೆಂಗಳೂರು ಉತ್ತರ ವಿಭಾಗ.

ಡಾ.ಎಂ.ಬಿ.ಬೋರಲಿಂಗಯ್ಯ – ಎಸ್ಪಿ, ಬೆಂಗಳೂರು ಗುಪ್ತದಳ (ಆಡಳಿತ); ಅಭಿನವ್ ಖರೆ – ಕಮಾಂಡೆಂಟ್, ಗೃಹರಕ್ಷಕ ದಳ; ಇಡಾ ಮಾರ್ಟಿನ್ – ಎಸ್ಪಿ, ಕಲಬುರ್ಗಿ; ಕಾರ್ತಿಕ್‍ರೆಡ್ಡಿ –ಎಐಜಿಪಿ,ಬೆಂಗಳೂರು ಡಿಜಿಪಿ ಕಚೇರಿ; ಕೆ.ಸಂತೋಷ್‍ ಬಾಬು– ಎಸ್ಪಿ, ಚಿಕ್ಕಬಳ್ಳಾಪುರ; ಇಶಾಪಂಥ್ – ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ;ಧರ್ಮೇಂದ್ರ ಕುಮಾರ್ ಮೀನಾ – ಎಸ್ಪಿ, ಸಿಐಡಿ; ನಿಶಾ ಜೇಮ್ಸ್– ಎಸ್ಪಿ, ಉಡುಪಿ.

ಲಕ್ಷ್ಮಣ ನಿಂಬರಗಿ– ಎಸ್ಪಿ, ಬೆಂಗಳೂರು ವೈರ್‌ಲೆಸ್ ವಿಭಾಗ; ಸೋನಾವಾನೆ ಋಷಿಕೇಶ್ ಭಗವಾನ್– ಎಸ್ಪಿ, ಯಾದಗಿರಿ; ಎಲ್‌.ನಾಗೇಶ್– ಡಿಸಿಪಿ, ಹುಬ್ಬಳ್ಳಿ-ಧಾರವಾಡ; ಎಂ.ಅಶ್ವಿನಿ– ಎಸ್ಪಿ, ಶಿವಮೊಗ್ಗ; ಎನ್‌.ವಿಷ್ಣುವರ್ಧನ– ಡಿಸಿಪಿ, ಬೆಂಗಳೂರು ಗುಪ್ತದಳ; ಎಚ್‌.ಡಿ. ಆನಂದ್‌ಕುಮಾರ್ – ಎಸ್ಪಿ, ಚಾಮರಾಜನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT