ಸೋಮವಾರ, ಸೆಪ್ಟೆಂಬರ್ 20, 2021
21 °C

ಅರಣ್ಯ ಇಲಾಖೆ ಲೋಪ: ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ 5 ಸಾವಿರ ಸಸಿಗಳ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಚಿತ್ರದುರ್ಗ ಜಿಲ್ಲೆಯ ಐನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಶ ಮಾಡಲಾಗಿದೆ. 

ಎರಡು ದಿನಗಳ ಹಿಂದೆ ಸಸಿಗಳನ್ನು ನಾಶ ಮಾಡಲಾಗಿದ್ದು, ಬುಧವಾರ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯೇ ಇವುಗಳನ್ನು ನಾಶ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾಮಾಜಿಕ ಅರಣ್ಯ ವಿಭಾಗ ಸಾರ್ವಜನಿಕರಿಗೆ ವಿತರಿಸಲು ಸಸಿಗಳನ್ನು ಬೆಳೆಸಿತ್ತು. ಬೇವು, ಹಲಸು ಸೇರಿ ವಿವಿಧ ಜಾತಿಯ ಸಸ್ಯಗಳು ಇಲ್ಲಿದ್ದವು. ನೀರು, ಗೊಬ್ಬರ ಹಾಕಿ ಇವುಗಳನ್ನು ಪೋಷಣೆ ಮಾಡಲಾಗಿತ್ತು.

ಕಳೆದ ವರ್ಷದ ಸಸಿಗಳು ಇದ್ದರೂ, ಮತ್ತೆ ಹೊಸ ಸಸಿಗಳನ್ನು ಖರೀದಿ ಮಾಡಲಾಗಿತ್ತು ಎನ್ನಲಾಗಿದೆ. ಲೋಪವನ್ನು ಮುಚ್ಚಿಕೊಳ್ಳಲು ಹಳೆಯ ಸಸಿಗಳನ್ನು ನಾಶ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು