ಅತ್ತೆಗೂ ಗೊತ್ತಿಲ್ಲದೆ 4.5 ಕೆ.ಜಿ ಚಿನ್ನ ಬಚ್ಚಿಟ್ಟರು!

7
80 ಬಳೆ, ವಜ್ರದ ಸರ ಮುಚ್ಚಿಟ್ಟ ದಂಪತಿ

ಅತ್ತೆಗೂ ಗೊತ್ತಿಲ್ಲದೆ 4.5 ಕೆ.ಜಿ ಚಿನ್ನ ಬಚ್ಚಿಟ್ಟರು!

Published:
Updated:
Deccan Herald

ಬೆಂಗಳೂರು/ ತುಮಕೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ ಗೌಡಯ್ಯ ಜಯನಗರದ ತಮ್ಮ ಅತ್ತೆ (ಪತ್ನಿಯ ತಾಯಿ) ಮನೆಯಲ್ಲಿ 4.5 ಕೆ.ಜಿ ಚಿನ್ನದ ಆಭರಣಗಳನ್ನು ಬಚ್ಚಿಟ್ಟಿದ್ದರೂ ಅದು ಚಿನ್ನ ಎಂದು ಅತ್ತೆಗೆ ಗೊತ್ತಾಗಿದ್ದು ಎಸಿಬಿ ದಾಳಿ ಬಳಿಕ!

ಗೌಡಯ್ಯ ಹಾಗೂ ಅವರ ಪತ್ನಿ ಈ ಮನೆಯಲ್ಲಿ ಕೋಣೆಯೊಂದನ್ನು ಇಟ್ಟುಕೊಂಡಿದ್ದರು. ಅವರು ಮನೆಗೆ ಬಂದಾಗ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಗುಟ್ಟಾಗಿ ಚಿನ್ನ ತೆಗೆಯುವುದು, ಇಡುವುದು ಮಾಡುತ್ತಿದ್ದರು. ಆ ಬಗ್ಗೆ ಅತ್ತೆ ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 80 ಬಳೆ, 15 ಕ್ಯಾರೆಟ್‌ ವಜ್ರದ ಸರವನ್ನು ಅತ್ತೆಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಎಸಿಬಿ ಅಧಿಕಾರಿಗಳ ದಾಳಿಯಿಂದ ಗೌಡಯ್ಯ ಅವರ ಅತ್ತೆ ಕಕ್ಕಾಬಿಕ್ಕಿಯಾಗಿದ್ದಾರೆ. ಮಗಳು, ಅಳಿಯ ಇಷ್ಟೊಂದು ಚಿನ್ನ ಇಟ್ಟಿರುವುದು ತಮಗೆ ಗೊತ್ತೇ ಇರಲಿಲ್ಲ. ಅವರು ಈ ಬಗ್ಗೆ ಸಣ್ಣದೊಂದು ಗುಟ್ಟು ಬಿಟ್ಟಿರಲಿಲ್ಲ ಎಂದಿದ್ದಾರೆ.

ಎಸಿಬಿ ಅಧಿಕಾರಿಗಳು ಇದುವರೆಗೂ ಎಂಜಿನಿಯರ್‌ಗಳ ಬ್ಯಾಂಕ್‌ ಠೇವಣಿಗಳನ್ನು ಪರಿಶೀಲಿಸಿಲ್ಲ. ಶನಿವಾರದಿಂದ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಈ ದಾಳಿ ಬಳಿಕ ಅಧಿಕಾರಿಗಳು ಮಾಡಿರುವ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಾಪಟ್ಟೆ ಕರೆಗಳು ಬರುತ್ತಿವೆ. 

ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರಿ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್‌ ರೋಲರ್‌, ಶಾಲಾ ಬಸ್‌ಗಳು, ಕಾರುಗಳು ಪತ್ತೆಯಾಗಿವೆ. ಈ ಅಧಿಕಾರಿ ಸೋದರ ರಾಮಲಿಂಗೇಗೌಡ ಬೆಳ್ಳಾವಿಯಲ್ಲಿ ಕಿಡ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಶುಕ್ರವಾರ ನಡೆದ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !