ಮಂಗಳವಾರ, ನವೆಂಬರ್ 19, 2019
29 °C
ಬೆಟ್ಟದಲ್ಲಿ ಹೈಡ್ರಾಮಾ

ಚಾಮುಂಡಿ ಬೆಟ್ಟದಲ್ಲಿ ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಕಿಡಿ

Published:
Updated:

ಮೈಸೂರು: ನಾನು ₹ 25 ಕೋಟಿಗೆ ಖರೀದಿಯಾಗಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ನನ್ನನ್ನು ಖರೀದಿಸಿದ ಆ ವ್ಯಕ್ತಿ ಬರಲಿ ಎಂದು ಕಾಯುತ್ತಿದ್ದೇನೆ ಎಂದು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ ಅವರು ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಎಚ್.ವಿಶ್ವನಾಥ್ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧ: ಸಾ.ರಾ.ಮಹೇಶ್

‘ನಾನು ಆಣೆ ಮಾಡುತ್ತೇನೆ ಎಂದು ಹೇಳಿಲ್ಲ. ವಿಷಯ ತಿರುಚಬೇಡಿ. ನಾನ್ಯಾಕೆ ಆಣೆ ಮಾಡಲಿ? ಆರೋಪ ಮಾಡಿದ್ದು ಅವರು. ಅವರು ಆರೋಪ ಸಾಬೀತುಪಡಿಸಲಿ. ನನ್ನನ್ನು ಖರೀದಿಸಿದ ವ್ಯಕ್ತಿಯನ್ನು ತೋರಿಸಲಿ’ ಎಂದು ವಿಶ್ವನಾಥ್ ಸವಾಲು ಹಾಕಿದರು.

ಉಭಯ ನಾಯಕರು ಪಟ್ಟು ಬಿಡದ ಕಾರಣ ಬೆಟ್ಟದಲ್ಲಿ ತುಸು ಹೊತ್ತು ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಜತೆಗೆ ಮಹೇಶ್, ವಿಶ್ವನಾಥ್ ಬೆಂಬಲಿಗರೂ ಗದ್ದಲ ಉಂಟುಮಾಡಿದರು. ಬಳಿಕ ವಿಶ್ವನಾಥ್ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ವಿಶ್ವನಾಥ್ ಬೆಟ್ಟದಿಂದ ತೆರಳಿದರು.

ಇನ್ನಷ್ಟು...

ವಿಶ್ವನಾಥ್ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಕ್ಷಮೆ ಯಾಚಿಸುವೆ–ಸಾ.ರಾ ಮಹೇಶ್

ರಾಜೀನಾಮೆ ಸಲ್ಲಿಸಿರುವೆ: ಮಹೇಶ್‌

ಪ್ರತಿಕ್ರಿಯಿಸಿ (+)