ಬುಧವಾರ, ಜನವರಿ 22, 2020
24 °C
ಹನುಮಮಾಲಾ ಯಾತ್ರೆ ಸಂಪನ್ನ

ಅಂಜನಾದ್ರಿ: 35 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳಿಂದ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸೋಮವಾರ ಹನುಮ ಜಯಂತಿ ಪ್ರಯುಕ್ತ ಮಾಲೆಯ ವಿಸರ್ಜನೆ ಕಾರ್ಯಕ್ರಮ ನಡೆಯಿತು.

ವಿವಿಧ ರಾಜ್ಯಗಳಿಂದ 35 ಸಾವಿರಕ್ಕೂ ಹೆಚ್ಚು ಜನ ವ್ರತಾಧಾರಿಗಳು 542 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸಿದರು. ಕೆಲ ವ್ರತಾಧಾರಿಗಳು ಬೆಳಿಗ್ಗೆ 5ರಿಂದಲೇ ದರ್ಶನಕ್ಕೆ ಸರತಿಯಲ್ಲಿ ನಿಂತಿದ್ದರು.

ಸಂಕೀರ್ತನಾ ಯಾತ್ರೆ ವೈಭವದಿಂದ ನಡೆಯಿತು. ಶಾಸಕ ಪರಣ್ಣ ಮುನವಳ್ಳಿ ಹನುಮಮಾಲೆ ಹಾಕಿ ಗಮನ ಸೆಳೆದರು. ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷ ಸೈಯದ್ ನಾಸಿರುದ್ದೀನ್ ಖಾದ್ರಿ ಯಾತ್ರಿಗಳಿಗೆ ಹಣ್ಣು, ಹೂವು ನೀಡಿ  ಸ್ವಾಗತಿಸಿದರು.

ಕಳೆದ ಬಾರಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿತ್ತು. ಹೀಗಾಗಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು