ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೇ ಕಲಾವಿದರು ಲಭ್ಯ!

ಮಧ್ಯವರ್ತಿಗಳಿಗೆ ಕಡಿವಾಣ; ಸಚಿವ ಸಿ.ಟಿ.ರವಿ ಮಾಹಿತಿ
Last Updated 13 ಡಿಸೆಂಬರ್ 2019, 19:38 IST
ಅಕ್ಷರ ಗಾತ್ರ

ಬೆಂಗಳೂರು: ನಿಮ್ಮ ಕಾರ್ಯಕ್ರಮವೊಂದರಲ್ಲಿ ಮನರಂಜಿಸಲು ಕಲಾವಿದರೊಬ್ಬರ ಅಗತ್ಯವಿದೆಯೇ? ಅಂತಹ ಕಲಾವಿದರನ್ನು ಪಡೆಯುವುದು ಇನ್ನು ಬಹಳ ಸುಲಭ. ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಬುಕ್‌ ಮಾಡಿದಂತೆ, ಕಲಾವಿದರನ್ನೂ ಬುಕ್‌ ಮಾಡಬಹುದು!

‘ರಾಜ್ಯದೆಲ್ಲೆಡೆ ಇರುವ ಸ್ಥಳೀಯ ಕಲಾವಿದರನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಆರಂಭವಾಗಿದ್ದು, ಸಂಪರ್ಕದ ವಿವರವನ್ನೂ ನೀಡಲಾಗುತ್ತದೆ. ಈ ವೈಬ್‌ಸೈಟ್‌ ಜನವರಿ 15ರೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಧ್ಯವರ್ತಿಗಳನ್ನು ಬದಿಗಿಟ್ಟು, ಜನರಿಗೆ ಕಲಾವಿದರನ್ನು ನೇರವಾಗಿ ಪರಿಚಯಿಸುವ, ಅವರ ಸಂಪರ್ಕ ಸಾಧಿಸುವ ತಂತ್ರಜ್ಞಾನದ ಬಳಕೆ ಇದು. ರಂಗಾಯಣದಂತಹ ಹಲವಾರು ವೇದಿಕೆಗಳ ಮೂಲಕ ಹಾಗೂ ಸ್ವತಂತ್ರವಾಗಿ ನೂರಾರು ಕಲಾವಿದರು ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಅವರ ಕಾರ್ಯಕ್ರಮಗಳನ್ನು ಸಹ ವೀಕ್ಷಿಸುವ ಅವಕಾಶ ಆಸಕ್ತರಿಗೆ ಒದಗಲಿದೆ’ ಎಂದರು

ಜನವರಿ 15ರೊಳಗೆ ವೈಬ್‌ಸೈಟ್‌ ಸಿದ್ಧವಾಗುವ ನಿರೀಕ್ಷೆ

ಮಧ್ಯವರ್ತಿಗಳನ್ನು ಬದಿಗಿಟ್ಟು, ಜನರಿಗೆ ಕಲಾವಿದರ ನೇರ ಪರಿಚಯ ಸಾಧ್ಯರಾಜ್ಯದಾದ್ಯಂತ ಇರುವಎಲ್ಲ ಕಲಾವಿದರು ಜಾಲತಾಣದ ವ್ಯಾಪ್ತಿಗೆ

ಹಳ್ಳಿಯಇತಿಹಾಸ: ‘ರಾಜ್ಯದಲ್ಲಿ 29,340 ಹಳ್ಳಿಗಳಿದ್ದು, ಪ್ರತಿಯೊಂದಕ್ಕೂ ತನ್ನದೇ ಆದಇತಿಹಾಸಇದೆ. ಎರಡು, ಮೂರು ತಲೆಮಾರಿನ ಬಳಿಕ ಅದು ಸ್ಥಳೀಯರಿಗೂ ತಿಳಿಯದೆ ಮರೆಯಾಗುತ್ತಿದೆ. ಹೀಗಾಗಿ ವಿಕಿಪೀಡಿಯಾ ಮಾದರಿಯಲ್ಲಿಹಳ್ಳಿಗಳಇತಿಹಾಸವನ್ನು ದಾಖಲಿಸುವ ಪ್ರಯತ್ನ ನಡೆಯಲಿದೆ, ಬಹುತೇಕ ಕಾಲೇಜು ವಿದ್ಯಾರ್ಥಿಗಳಿಂದ ಇಂತಹದಾಖಲೀಕರಣನಡೆದು, ಆಕ್ಷೇಪಣೆಗೆ ಆಹ್ವಾನ ನೀಡಿ ಬಳಿಕ ಅದನ್ನು ಅಪ್‌ಲೋಡ್ ಮಾಡಲಾಗುತ್ತದೆ’ ಎಂದು ಸಚಿವ ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT