ಭಾನುವಾರ, ಆಗಸ್ಟ್ 1, 2021
23 °C

ಬೆಳಗಾವಿ | 22 ಮಂದಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್–19 ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 22 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಸೋಮವಾರ ಇಲ್ಲಿನ ಬಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಇವರು ಹುಕ್ಕೇರಿ ತಾಲ್ಲೂಕು (7), ಗೋಕಾಕ, ಕೊಪ್ಪಳ, ಬಾಗಲಕೋಟೆ (ತಲಾ ಒಬ್ಬರು) ಬೆಳಗಾವಿ ತಾಲ್ಲೂಕಿನ ವಿವಿಧ ಗ್ರಾಮ (12)ದವರಾಗಿದ್ದಾರೆ. ರೋಗಿ ಸಂಖ್ಯೆಗಳಾದ 838, 3146, 3148, 3670, 3684, 3685, 3689, 4067, 4069, 4070, 4072, 4545, 4546, 4552, 4556, 4557, 5020, 5022, 5387, 5394, 5404 ಹಾಗೂ 5409 ಬಿಡುಗಡೆ ಆದವರು. ಇದರೊಂದಿಗೆ ಜಿಲ್ಲೆಯಲ್ಲಿ 247 ಮಂದಿ ಗುಣಮುಖರಾದಂತಾಗಿದೆ.

‘ಇಲ್ಲಿ ಸೋಮವಾರದವರೆಗೆ 58 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 43 ಮಂದಿ ವಯಸ್ಕರು, 15 ಮಕ್ಕಳು ಹಾಗೂ ಮೂವರು ಗರ್ಭಿಣಿಯರಿದ್ದಾರೆ’ ಎಂದು ಬಿಮ್ಸ್‌ ಕೋವಿಡ್ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ.ಗಿರೀಶ ದಂಡಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು