ಬುಧವಾರ, ಜನವರಿ 22, 2020
27 °C

ಮದ್ಯ ಸೇವಿಸಿದ್ದ ಮತಗಟ್ಟೆ ಅಧಿಕಾರಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಗೋಕಾಕ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ರ ಮತಗಟ್ಟೆ ಅಧಿಕಾರಿ ಪ್ರಕಾಶ ವೀರಭದ್ರಪ್ಪ ನಾಶಿಪುಡಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಸವದತ್ತಿ ತಾಲ್ಲೂಕಿನ ತೆಂಗಿನಹಾಳ ರಾಯಣ್ಣ ನಗರದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪ್ರಕಾಶ ಅವರನ್ನು ಮತಗಟ್ಟೆ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಇವರು ಬುಧವಾರ ಮಸ್ಟರಿಂಗ್‌ ವೇಳೆ ಚುನಾವಣಾ ಕೇಂದ್ರಕ್ಕೆ ಮದ್ಯ ಸೇವಿಸಿ ಬಂದಿದ್ದರು. ಇದರಿಂದ ಚುನಾವಣಾ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು.

ಇದಲ್ಲದೇ, ವೈದ್ಯಕೀಯ ತಪಾಸಣೆ ವೇಳೆ ಅವರು ಆಸ್ಪತ್ರೆಯಿಂದ ಓಡಿ ಹೋಗಿದ್ದರು. ಇವೆಲ್ಲ ಕಾರಣಗಳಿಂದಾಗಿ ಪ್ರಕಾಶ  ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು