ಬುಧವಾರ, ಏಪ್ರಿಲ್ 1, 2020
19 °C

ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಬರೆಯಿರಿ: ಮಹೇಶ ಎಸ್. ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

* ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿಯಿಂದ 30 ಚಿತ್ರಗಳ ಪಟ್ಟಿಯನ್ನು ಕೊಡಲಾಗಿದೆ. ಅವುಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ 12 ಅಂಕಗಳನ್ನು ಪಡೆಯಬಹುದು. ಚಿತ್ರಗಳನ್ನು ಅಂದವಾಗಿ ಬಿಡಿಸಬೇಕು. ಭಾಗಗಳನ್ನು ಸರಿಯಾಗಿ ನೋಡಿಕೊಂಡಿರಬೇಕು. ಅವರು ಕೇಳಿದ ಭಾಗಗಳನ್ನೇ ನಿಖರವಾಗಿ ಗುರುತಿಸಬೇಕು.

* ಮಂಡಳಿಯಿಂದ ಎರಡು ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಂತರ್ಜಾಲ ತಾಣದಲ್ಲೂ ಲಭ್ಯವಿದೆ. ಸರಣಿ ಪರೀಕ್ಷೆ ನಡೆಸಿದ ಪ್ರಶ್ನೆಪತ್ರಿಕೆ ನೋಡಿಕೊಳ್ಳಬೇಕು. ಎರಡು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಳ್ಳಬೇಕು. 5ರಿಂದ 6 ಪ್ರಶ್ನೆಪತ್ರಿಕೆಗಳು ಲಭ್ಯ ಇವೆ. ಅವುಗಳನ್ನು ವಿಶ್ಲೇಷಣೆ ಮಾಡುವುದರಿಂದ ಪ್ರಶ್ನೆಗಳ ಸ್ವರೂಪ ಅರ್ಥ ಮಾಡಿಕೊಳ್ಳಬಹುದು.

* ಅನ್ವಯಿಕ ಮಾದರಿಯ ಪ್ರಶ್ನೆಗಳು ಮಹತ್ವದ್ದಾಗಿದೆ. ವಿಷಯಯವನ್ನು ಕಂಠಪಾಠ ಮಾಡುವುದಕ್ಕಿಂತ ಸಂಪೂರ್ಣ ಅರ್ಥ ತಿಳಿದುಕೊಂಡು ಓದುವುದರಿಂದ ಇವುಗಳನ್ನು ಬಿಡಿಸಬಹುದಾಗಿದೆ. ಪರಿಕಲ್ಪನೆಯ ಸ್ಪಷ್ಟ ಮಾಹಿತಿ ಇರಬೇಕು. ಆಗ ಸುಲಭವಾಗುತ್ತದೆ. ಒಂದೇ ಬಾರಿಗೆ ಪ್ರಶ್ನೆ ಅರ್ಥವಾಗುವುದಿಲ್ಲ. 2 ಅಥವಾ 3 ಬಾರಿ ಓದಿಕೊಳ್ಳಬೇಕು. ಯಾವ ಪಾಠದ್ದು ಮತ್ತು ಪರಿಕಲ್ಪನೆಯ ಮೇಲೆ ಪ್ರಶ್ನೆ ಇದೆ ಎನ್ನುವ ಒಳತಿರುಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ, ಸಮರ್ಪಕ ಉತ್ತರ ಬರೆಯುಬಹುದಾಗಿದೆ.

* ಪಠ್ಯಪುಸ್ತಕದಲ್ಲಿ ನೀಲಿ ಬಣ್ಣದ ಬಾಕ್ಸ್‌ನಲ್ಲಿರುವ ಪ್ರಯೋಗ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಇರುತ್ತವೆ. ಈ ಬಗ್ಗೆ ಹೆಚ್ಚು ಗಮನಹರಿಸಬೇಕು.

* ಕೆಲವು ಪ್ರಶ್ನೆಗಳಿಗೆ ಆಂತರಿಕ ಆಯ್ಕೆಗಳಿರುತ್ತವೆ. ಹೆಚ್ಚು ಅಂಶಗಳು ಗೊತ್ತಿರಬಹುದಾದ ಪ್ರಶ್ನೆಗೆ ಉತ್ತರ ಬರೆಯುವುದರಿಂದ ಅಂಕ ಗಳಿಸಬಹುದು.

* ಈ ಬಾರಿ 15 ನಿಮಿಷ ಹೆಚ್ಚುವರಿ ಅವಧಿ ಕೊಡಲಾಗಿದೆ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ. ಏಕಾಗ್ರತೆಯಿಂದ ಇಡೀ ಪ್ರಶ್ನೆಪತ್ರಿಕೆ ಓದಬೇಕು. ಸುಲಭವಾಗಿ ಬಿಡಿಸಬಹುದಾದ ಪ್ರಶ್ನೆಗಳನ್ನು ಪೆನ್ಸಿಲ್‌ನಲ್ಲಿ ಮಾರ್ಕ್ ಮಾಡಿಕೊಂಡು, ಮೊದಲು ಅವುಗಳನ್ನು ಬಿಡಿಸಬೇಕು. ನಂತರ ಉಳಿದ ಪ್ರಶ್ನೆಗಳಿಗೆ ಆದ್ಯತೆ ಕೊಡಬೇಕು.

* ಅನವಶ್ಯವಾಗಿ ಉದ್ದುದ್ದ ಬರೆಯುವ ಬದಲಿಗೆ, ಮಹತ್ವದ್ದಷ್ಟನ್ನೇ ಬರೆಯಿರಿ. ಪ್ರಮುಖಾಂಶಗಳಿಗೆ ಅಂಡರ್‌ಲೈನ್ ಮಾಡಬೇಕು. ಅದು ಮೌಲ್ಯಮಾಪಕರ ಗಮನಸೆಳೆಯುತ್ತದೆ.

– ಮಹೇಶ ಎಸ್. ಅಂಗಡಿ, ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಪ್ರೌಢಶಾಲೆ, ಹಾರೊಗೊಪ್ಪ, ಸವದತ್ತಿ ತಾಲ್ಲೂಕು, ಬೆಳಗಾವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು