ಗುರುವಾರ , ನವೆಂಬರ್ 21, 2019
22 °C
ಸಿ.ಟಿ.ರವಿಗೆ ತಿರುಗೇಟು

ಅಮಾಯಕರ ಕೊಂದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಬೇಕು! ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ!’  ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮನ್ನು ಟೀಕಿಸಿದ ಸಚಿವ ಸಿ.ಟಿ.ರವಿಗೆ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದು ಹೀಗೆ.

ಸಾವರ್ಕರ್‌ಗೆ ಭಾರತ ರತ್ನ ಕೊಡುವ ಬಗ್ಗೆ ಬಿಜೆಪಿಯ ಮಹಾರಾಷ್ಟ್ರ ಘಟಕ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಿದ ಬಳಿಕ ಆ ಬಗ್ಗೆ ಪರ–ವಿರೋಧ ಚರ್ಚೆ ತಾರಕಕ್ಕೇರಿದೆ. ಈ ನಿಲುವನ್ನು ಸಿದ್ದರಾಮಯ್ಯ ಕೂಡ ವಿರೋಧಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿ.ಟಿ.ರವಿ, ‘ಮಹಾತ್ಮ ಗಾಂಧಿ ಹತ್ಯೆಯ ಸಂಚುಕೋರ ಎನ್ನುವ ಮೂಲಕ ರಾಷ್ಟ್ರೀಯವಾದಿ ವೀರ ಸಾವರ್ಕರ್ ಅವರನ್ನು ನೀವು ಅವಮಾನಿಸಿದ್ದೀರಿ. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಬಳಿಕ ನೀವು ಮಾನಸಿಕವಾಗಿ ವೈಕಲ್ಯಕ್ಕೆ ತುತ್ತಾಗಿದ್ದೀರಾ? ಇತಿಹಾಸದ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ? ಯಾಕೆ ನೀವು ಸೆಲ್ಯುಲರ್ ಜೈಲಿಗೆ ಭೇಟಿ ನೀಡಬಾರದು! ನಿಮ್ಮ ಪ್ರವಾಸಕ್ಕೆ ನಾನು ವ್ಯವಸ್ಥೆ ಮಾಡುತ್ತೇನೆ’ ಎಂದು ರವಿ ಟ್ವೀಟ್ ಮಾಡಿದ್ದರು.

ಇನ್ನಷ್ಟು...

ಬಿ.ಎಲ್.ಸಂತೋಷ್ ಗುಂಡಿ ಒತ್ತಿದರೆ ನಳಿನ್ ಡ್ಯಾನ್ಸ್: ಸಿದ್ದರಾಮಯ್ಯ

ಸಿದ್ದರಾಮಯ್ಯ ಪಂಡಿತರು, ತತ್ವಜ್ಞಾನಿಗಳು: ಕಟೀಲ್‌ ವ್ಯಂಗ್ಯ

ಪ್ರತಿಕ್ರಿಯಿಸಿ (+)