ಗುರುವಾರ , ಜೂನ್ 17, 2021
28 °C

ಇಂದು ಅಂಬರೀಶ್‌ ಜನ್ಮದಿನ: ಹರಿಯಿತು ಅಭಿಮಾನದ ಹೊಳೆ  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದು (ಮೇ.29) ಕನ್ನಡ ಚಿತ್ರರಂಗದ ಮೇರುನಟ ಅಂಬರೀಶ್‌ ಅವರ 69ನೇ ಜನ್ಮದಿನ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳಿಂದ ಶುಭಾಶಯಗಳ ಹೊಳೆಯೇ ಹರಿಯುತ್ತಿದೆ. 

ಅಂಬರೀಶ್‌ ಅವರ ಜನ್ಮದಿನ ಅವರ ಅಭಿಮಾನಿಗಳ ಪಾಲಿಗೆ ಸಂಭ್ರಮ, ಸಡಗರದ ಹಬ್ಬವೇ ಆಗಿರುತ್ತಿತ್ತು. ಹೀಗಾಗಿ ಒಂದು ದಿನ ಮುಂಚಿತವಾಗಿಯೇ ಅಂಬರೀಶ್‌ ನಿವಾಸದ ಎದುರು ಸೇರುತ್ತಿದ್ದ ಅಭಿಮಾನಿಗಳು ರಾತ್ರಿ 12 ಗಂಟೆ ಆಗುತ್ತಲೇ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಪಡುತ್ತಿದ್ದರು. ಆದರೆ, ಅಂಬರೀಶ್‌ ಅಗಲಿಕೆಯ ನಂತರ ಈ ಪರಿಪಾಠ ನಿಂತಿದೆಯಾದರೂ, ಸಾಮಾಜಿಕ ತಾಣಗಳಲ್ಲಿ ಅವರ ಮೇಲಿನ ಅಭಿಮಾನದ ಅಭಿವ್ಯಕ್ತಿ ಎಂದಿನಂತೇ ಇದೆ. 

ಜನ್ಮದಿನದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಅಂಬರೀಶ್‌ ಪತ್ನಿ, ಮಂಡ್ಯ ಸಂಸದೆ ಸುಮಲತಾ, ’ನಿಮ್ಮ ನೆನಪೇ ನಿತ್ಯ ಜ್ಯೋತಿ,  ನಿಮ್ಮ ಸ್ಮರಣೆಯೇ ಅಮರ ಪ್ರೀತಿ,’ ಎಂದು ನೆನಪಿಸಿಕೊಂಡಿದ್ದಾರೆ. 'ಅವರು ಇಂದು 68 ನೇ ವರ್ಷಕ್ಕೆ ಕಾಲಿಡುತ್ತಿದ್ದರು. ವಿಧಿ ಅವರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಅವರ ಹೃದಯ ವಿಶ್ವದಂತೆ. ಜೀವನದಲ್ಲಿ ಅವರೊಂದಿಗೆ ಕೆಲವು ಹೆಜ್ಜೆಗಳನ್ನು ಹಾಕಿದ್ದು ಹೆಮ್ಮೆ ಎನಿಸುತ್ತಿದೆ,’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. 

ಮಂಡ್ಯದವರೇ ಆದ ನಟ ನೀನಾಸಂ ಸತೀಶ್‌ ಅವರು ಅಂಬರೀಶ್‌ ಅವರಿಗಾಗಿ ಹಾಡೊಂದನ್ನು ಸಿದ್ಧಪಡಿಸಿದ್ದು, ಇಂದು  ಬೆಳಗ್ಗೆ 9ಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಾಗಿ ಟ್ವೀಟ್‌ ಮಾಡಿದ್ದಾರೆ.  

ಮಂಡ್ಯದ ಗಂಡು ಖ್ಯಾತಿಯ ನಟ ಅಂಬರೀಶ್‌ ಅವರು 2018ರ ನ.24ರಂದು ನಿಧನರಾಗಿದ್ದರು. 

ಇನ್ನಷ್ಟು...
 

ಇನ್ನಷ್ಟು ಓದು

ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ? 

ರಾಜಕೀಯದಲ್ಲೂ ‘ರೆಬೆಲ್‌’

ಅಭಿಮಾನಿಗಳಿಗೆ ಅಂಬರೀಷ್ ಬರೆದಿದ್ದ ಪತ್ರ

‘ಕಾವೇರಿ’ಗಾಗಿ ರಾಜೀನಾಮೆ ಕೊಟ್ಟಿದ್ದ ಮಂಡ್ಯದ ಗಂಡು

ಗೆಳೆಯನ ಸಾವು; ಕಂಬನಿ ಮಿಡಿದ ರಜನಿಕಾಂತ್‌

ಗ್ಲ್ಯಾಮರ್–ಗ್ರ್ಯಾಮರ್ ಸೂತ್ರ ಸಿನಿಮಾ-ರಾಜಕಾರಣದ ಪಾತ್ರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು