ಭಾನುವಾರ, ಆಗಸ್ಟ್ 1, 2021
28 °C

ನಾನು ಅವಿರೋಧ ಆಯ್ಕೆಯಾಗಲು ಬಿಜೆಪಿ ಸಹಕಾರವೂ ಇದೆ: ಎಚ್.ಡಿ. ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯಸಭೆಗೆ ನಾನು ಅವಿರೋಧ ಆಯ್ಕೆಯಾಗಲು ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ಸಹಕಾರವೂ ಇದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಮಂಗಳವಾರ ಇಲ್ಲಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಹಿಂದೆ ಯಾವ ಪಕ್ಷದ ಬೆಂಬಲ ಇಲ್ಲದೆ ಚುನಾವಣೆ ಗೆದ್ದಿದ್ದೆ. ಬಿಜೆಪಿಯಲ್ಲಿ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಲಿಂಬಾವಳಿ ಅವರು ಇದನ್ನು ನನಗೆ ತಿಳಿಸಿದ್ದರು. ಇದರ ಹೊರತಾಗಿ ಬಿಜೆಪಿಯವರು ನನ್ನನ್ನು ಭೇಟಿ ಮಾಡಿಲ್ಲ. ಜೆಡಿಎಸ್ ಶಾಸಕರ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಸಿದೆ" ಎಂದರು.

'ವಯಸ್ಸಾಯ್ತು ನೀ ನಿಂತುಕೋ ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಗ್ಯಾಪ್ ಆಗುತ್ತೆ. ಎಂದು ಆತ ಹೇಳಿದ. ದೆಹಲಿಯಿಂದ ಫೋನ್ ಮಾಡಿದಾಗ, ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮೇಡಂ ಸೋನಿಯಾ ಗಾಂಧಿ  ಮನಸ್ಸು ಬಿಚ್ಚಿ ಹೇಳಿದರು. ಕಾಂಗ್ರೆಸ್‌ನ ಎಲ್ಲರಿಗೂ ಅಭಾರಿ' ಎಂದು ತಿಳಿಸಿದರು.

'ನಾನು ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗೆ ಹೋರಾಟ ಮಾಡಿದ್ದೇನೆ.  ಭಾರತದಲ್ಲಿ ಯಾರು ಪ್ರಶ್ನೆ ಮಾಡದೆ ನಡೆದುಕೊಂಡಿದ್ದೇನೆ. ಮುಂದೆಯೂ ನಡೆದುಕೊಳ್ಳುತ್ತೇನೆ. ರಾಜ್ಯಸಭೆಯಲ್ಲಿ ಮಾತನಾಡಲು ಎರಡು ಮೂರು ನಿಮಿಷ ಅಷ್ಟೆ ಅವಕಾಶ ಸಿಗುತ್ತೆ. ಜನರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡುವಾಗ ಯಾರ ದಾಕ್ಷಿಣ್ಯಕ್ಕೂ ಒಳಗಾಗಲ್ಲ.  ಅಗತ್ಯ ಬಿದ್ದರೆ ನಿಯೋಗ ಕರೆದುಕೊಂಡು ಹೋಗಲು ಕ್ರಮ ತೆಗೆದುಕೊಳ್ಳುತ್ತೇನೆ. ಇದು ಕೊನೆ ಹೋರಾಟವೋ ಏನೋ ಗೊತ್ತಿಲ್ಲ. ಜೀವನದಲ್ಲಿ ಸಿದ್ಧಾಂತದ ಜೊತೆ ಯಾವುದೇ ರಾಜಿ ಇಲ್ಲ. ನಾಯಕರ ತೀರ್ಮಾನಕ್ಕೆ ತಲೆ ಬಾಗಿದ್ದೇನೆ' ಎಂದರು.

'ಕುಮಾರಸ್ವಾಮಿ ಸಿಎಂ ಮಾಡುವಾಗ ನಾನು ಒಪ್ಪಲಿಲ್ಲ. ಕೊನೆಗೆ ಒಪ್ಪಿದೆ. ಆರು ಜನ‌ ಹಾಲಿ‌ ಸಿಎಂ, ಹದಿನಾರು ಜನ‌ಜಾತ್ಯತೀತ ನಾಯಕರನ್ನು ಕರೆಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲಾಯಿತು. ಇಪ್ಪತ್ತ ನಾಲ್ಕು ಪಕ್ಷಗಳ ಜೊತೆ ವಿಡೀಯೊ ಕಾನ್ಫರೆನ್ಸ್ ಮಾಡಿದ್ದರು. ಕೊಬ್ಬರಿ ಬೆಲೆ ಬಿದ್ದಿದೆ.‌ ಹೋರಾಟ ನಡೆಯುತ್ತಿದೆ. ಅದನ್ನ ಚರ್ಚಿಸಲು ಅವಕಾಶ ಸಿಕ್ಕಲಿಲ್ಲ. ರಾಜ್ಯ ನಾಯಕರಿಗೆ ನಾನು ಶತ್ರು ಅಲ್ಲ. ನಮ್ಮ ಪಕ್ಷದ ಎಲ್ಲಾ ನಾಯಕರು ಒತ್ತಾಯ ಮಾಡಿದರು. ಮಿಸ್ ಯು ಇನ್ ಲೋಕಸಭಾ ಎಂದು ಸೋನಿಯಾ ಹೇಳಿದ್ದರು. ವೇಣುಗೋಪಾಲ್ ಕುಮಾರಸ್ವಾಮಿಗೆ ಫೋನ್ ಮಾಡಿದ್ದರು. ನಮ್ಮ ಜಾತ್ಯತೀತ ಹೋರಾಟ ನಡೆಸುತ್ತೇವೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು