ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ಇತರ ರಾಜ್ಯಗಳಲ್ಲೂ ‘ಆಪರೇಷನ್‌ ಕಮಲ’: ಸತೀಶ ಭವಿಷ್ಯ

ಭಾನುವಾರ, ಮೇ 26, 2019
31 °C

ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ಇತರ ರಾಜ್ಯಗಳಲ್ಲೂ ‘ಆಪರೇಷನ್‌ ಕಮಲ’: ಸತೀಶ ಭವಿಷ್ಯ

Published:
Updated:
Prajavani

ಬೆಳಗಾವಿ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಲಭಿಸಿದರೆ ರಾಜ್ಯದಲ್ಲಿ ಆಪರೇಷನ್‌ ಕಮಲ ನಡೆಯುವ ಸಾಧ್ಯತೆ ಇದೆ' ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘2014ರ ಚುನಾವಣೆ ಫಲಿತಾಂಶದಂತೆ ಈ ಸಲವೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದರೆ ಆಪರೇಷನ್‌ ಕಮಲ ಮಾಡುವುದು ಖಚಿತ. ಸ್ಥಾನಗಳು ಕಡಿಮೆ ಬಂದರೆ ಮಾಡುವುದಿಲ್ಲ’ ಎಂದರು.

‘ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಇತರ ರಾಜ್ಯಗಳಲ್ಲೂ ಅವರು ಆಪರೇಷನ್‌ ನಡೆಸುವ ಸಾಧ್ಯತೆ ಇದೆ. ಟಿಎಂಸಿಯ 40 ಶಾಸಕರ ಜೊತೆ ಸಂಪರ್ಕ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಹೇಳಿದ್ದಾರೆ. ಇಂತಹದ್ದೇ ಹೇಳಿಕೆಯನ್ನು ಮಧ್ಯಪ್ರದೇಶದಲ್ಲೂ ನೀಡಿದ್ದಾರೆ. ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಶಾಸಕರೊಬ್ಬರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಸಹೋದರ, ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದರೆ ಉಪಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಅದಕ್ಕಾಗಿ ಪಕ್ಷವನ್ನು ಸಜ್ಜುಗೊಳಿಸಿದ್ದೇವೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !