ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ: ಡಿಕೆ ಶಿವಕುಮಾರ್

Last Updated 18 ಮಾರ್ಚ್ 2020, 4:44 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮಗೆ ನಮ್ಮದೇ ಆದ ರಾಜಕೀಯ ಕಾರ್ಯತಂತ್ರ ಇದೆ. ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂದು ನಮಗೆ ತಿಳಿದಿದೆ. ದಿಗ್ವಿಜಯ ಸಿಂಗ್ ಒಬ್ಬರೇ ಅಲ್ಲ, ನಾನೂ ಇಲ್ಲಿದ್ದೇನೆ. ಅವರಿಗೆ ಯಾವ ರೀತಿ ಬೆಂಬಲ ನೀಡಬೇಕು ಎಂದು ತಿಳಿದಿದೆ. ಆದರೆ ಕರ್ನಾಟಕದಲ್ಲಿ ಕಾನೂನು ಅವ್ಯವಸ್ಥೆ ಉಂಟು ಮಾಡಲು ನಾನು ಬಯಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಯಲಹಂಕದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಿಗ್ವಿಜಯ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್


ಮಧ್ಯಪ್ರದೇಶದ 21 ಶಾಸಕರು ವಾಸ್ತವ್ಯ ಹೂಡಿರುವ ಬೆಂಗಳೂರಿನ ರಮಾಡ ಹೋಟೆಲ್ ಬಳಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಬುಧವಾರ ಬೆಳಗ್ಗೆ ಧರಣಿ ಕುಳಿತಿದ್ದರು. ಇವರಿಗೆ ಡಿಕೆಶಿ ಸಾಥ್ ನೀಡಿದ್ದರು.ಧರಣಿ ಕುಳಿತಿದ್ದ ದಿಗ್ವಜಯ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿ ಯಲಹಂಕದಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಿಂಗ್ ಹೇಳಿದ್ದಾರೆ.

ಇದು ಬಿಜೆಪಿ ಮಾದರಿ ಪ್ರಜಾತಂತ್ರ - ದಿಗ್ವಿಜಯ ಸಿಂಗ್ ಟ್ವೀಟ್

ಬಿಜೆಪಿ ಮಾದರಿ ಆಳ್ವಿಕೆ ಪ್ರಜಾತಂತ್ರ
ಶಾಸಕರು ಮುಖ್ಯಮಂತ್ರಿ ಜತೆ ಮಾತನಾಡುವಂತಿಲ್ಲ
ಶಾಸಕರು ಅವರ ಕುಟುಂಬ ಸದಸ್ಯರೊಂದೆಗೆ ಮಾತನಾಡುವಂತಿಲ್ಲ
ಶಾಸಕರು ಸ್ಪೀಕರ್ ಜತೆ ಮಾತನಾಡುವಂತಿಲ್ಲ
ಶಾಸಕರು ಪಕ್ಷದ ನೇತಾರರ ಜತೆ ಮಾತನಾಡುವಂತಿಲ್ಲ
ಶಾಸಕರು ನಿಯಂತ್ರಿತ ಪರಿಸ್ಥಿತಿಯಲ್ಲಿ ಮತ್ತು ವಿಪಕ್ಷದ ಗೂಂಡಾಗಳ ದುರುಗುಡುವ ನೋಟದಡಿಯಲ್ಲಿ ಮಾತ್ರ ಮಾತನಾಡಬಹುದು.
ಇದನ್ನು ಪ್ರಜಾತಂತ್ರ ಎಂದು ಕರೆಯುತ್ತಾರೆ

ಅವರು ಹಿಂತಿರುಗಿ ಬರುತ್ತಾರೆ ಎಂಬ ನಿರೀಕ್ಷೆ ನಮಗಿತ್ತು ಆದರೆ ಅವರನ್ನು ಅಲ್ಲಿ ತಡೆ ಹಿಡಿದಾಗ ಅವರ ಕುಟುಂಬದವರಿಂದ ಸಂದೇಶ ಬರತೊಡಗಿತು. ನಾನು ಐವರು ಶಾಸಕರಲ್ಲಿ ಮಾತನಾಡಿದ್ದೇನೆ, ಅವರನ್ನು ಅಲ್ಲಿ ಹಿಡಿದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಮೊಬೈಲ್ ಕಿತ್ತುಕೊಳ್ಳಲಾಗಿದೆ . ಪ್ರತಿ ಕೋಣೆಯ ಮುಂದೆ ಪೊಲೀಸ್ ಕಾವಲಿದೆ. ಅವರ ಮೇಲೆ 24/7 ನಿಗಾ ವಹಿಸಲಾಗಿದೆ ಎಂದು ದಿಗ್ವಿಜಯಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT