ಗುರುವಾರ , ಜುಲೈ 29, 2021
21 °C
ಮೇಲ್ಮನೆ ಚುನಾವಣೆ: ಬಿಜೆಪಿ ಪ್ರಮುಖರ ಸಭೆ

ಬಿಜೆಪಿ: ವಲಸಿಗರಿಗೆ ಎಂಎಲ್‌ಸಿ ಟಿಕೆಟ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೈತ್ರಿ’ ಸರ್ಕಾರ ಪತನಗೊಳಿಸಿ ಬಿಜೆಪಿಗೆ ಬಂದಿದ್ದ ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್ ಮತ್ತು ಆರ್‌.ಶಂಕರ್‌
ಅವರ ಹೆಸರನ್ನು ವಿಧಾನಪರಿಷತ್‌ ಚುನಾವಣಾ ಅಭ್ಯರ್ಥಿಗಳಾಗಿ ಬಿಜೆಪಿ ಪ್ರಮುಖರ ಸಭೆಯು ಕೇಂದ್ರ ಸಮಿತಿಗೆ ಶಿಫಾರಸು ಮಾಡಿದೆ.

ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳವುದನ್ನು ಕೇಂದ್ರ ಚುನಾವಣಾ ಸಮಿತಿಗೇ ಬಿಡಲಾಗಿದೆ. ಈ ಮೂವರಲ್ಲಿ ಶಂಕರ್‌ ಅವರಿಗೆ ಟಿಕೆಟ್ ಸಿಗುವಸಾಧ್ಯತೆ ಹೆಚ್ಚು. ಉಳಿದ ಇಬ್ಬರಲ್ಲಿ ಒಬ್ಬರಿಗಷ್ಟೇ ಅವಕಾಶ ಸಿಗಬಹುದು ಎನ್ನಲಾಗಿದೆ.

ಈ ಮೂಲಕ ನಾಲ್ಕು ಸ್ಥಾನಗಳ ಪೈಕಿ 2 ಸ್ಥಾನಗಳನ್ನು ವಲಸೆ ಬಂದವರಿಗೂ ಉಳಿದ 2 ಸ್ಥಾನಗಳನ್ನು ಮೂಲ ಬಿಜೆಪಿಯವರಿಗೆ ನೀಡುವ ಸಾಧ್ಯತೆ ಇದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ‍ಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು