ಮಂಗಳವಾರ, ಆಗಸ್ಟ್ 3, 2021
26 °C

ಯಡಿಯೂರಪ್ಪ ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿ: ಆರ್. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮುಂದಿನ ಮೂರು ವರ್ಷದ ಅವಧಿಗೂ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ. ನಮ್ಮಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿದರು.

ಬುಧವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ನಮ್ಮಲ್ಲಿನ ಪ್ರತಿ ಶಾಸಕ, ಕಾರ್ಯಕರ್ತರಿಗೂ ಬೇಕಾದ್ದನ್ನು ಕೇಳುವ ಹಕ್ಕಿದೆ. ಕೆಲವರು ಕೇಳಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಕಾಂಗ್ರೆಸ್‌ನ ಹಾಗೆ ನಮ್ಮದು ದುರ್ಬಲ ಹೈಕಮಾಂಡ್ ಅಲ್ಲ’ ಎಂದು ಟೀಕಿಸಿದರು.

‘ಒಡೆದು ಆಳುವುದು ಕಾಂಗ್ರೆಸ್ನ ಚಾಳಿ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದೂ ಅವರೇ. ಈಗ ಜೆಡಿಎಸ್‌ನವರಿಗೆ ಅದರ ಅರಿವಾಗಿದೆ. ಹಿಂದೊಮ್ಮೆ ನಾವು ಜೆಡಿಎಸ್ ಜೊತೆಗೂಡಿ ಆಡಳಿತ ನಡೆಸಿದ್ದೇವೆ. ಮತ್ತೆ ಸಹಕಾರ ನೀಡುವುದಾದರೆ ಸ್ವಾಗತಿಸುತ್ತೇವೆ’ ಎಂದರು. 

ರಾಜ್ಯಸಭೆ, ಪರಿಷತ್ ಚುನಾವಣೆ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ನಡೆಯಲಿದ್ದು, ನಂತರವಷ್ಟೇ ಅಭ್ಯರ್ಥಿಗಳ ತೀರ್ಮಾನ ಆಗಲಿದೆ. ಈವರೆಗೆ ಪಕ್ಷ ಯಾರನ್ನೂ ಅಂತಿಮಗೊಳಿಸಿಲ್ಲ ಎಂದರು.

‘ರಾಜ್ಯದ ಮೇಲೆ ನಿಸರ್ಗ ಚಂಡಮಾರುತದ ಪ್ರಭಾವ ಕಡಿಮೆ. ಆದಾಗ್ಯು ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು