ಕುಂದಗೋಳ ವಿಧಾನಸಭಾ ಕ್ಷೇತ್ರ: ಮೇ 19ಕ್ಕೆ ಉಪಚುನಾವಣೆ

ಶುಕ್ರವಾರ, ಏಪ್ರಿಲ್ 26, 2019
35 °C
ದೇಶದ ಆರು ಕ್ಷೇತ್ರಗಳಲ್ಲಿ ಉಪಚುನಾವಣೆ

ಕುಂದಗೋಳ ವಿಧಾನಸಭಾ ಕ್ಷೇತ್ರ: ಮೇ 19ಕ್ಕೆ ಉಪಚುನಾವಣೆ

Published:
Updated:

ಬೆಂಗಳೂರು: ಸಚಿವ ಚನ್ನಬಸಪ್ಪ.ಎಸ್‌.ಶಿವಳ್ಳಿ ಅವರ ನಿಧನದಿಂದ ತೆರೆವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭೆ ಕ್ಷೇತ್ರವೂ ಸೇರಿದಂತೆ ರಾಷ್ಟ್ರದ ವಿವಿಧ 6 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವು ಮೇ 19ರಂದು ನಿಗದಿಗೊಳಿಸಿದೆ.

ಇದನ್ನೂ ಓದಿ: ಬಡವರ ಬಂಧು’ ಸಚಿವ ಸಿ.ಎಸ್‌. ಶಿವಳ್ಳಿ

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರೀಕರ್‌ ಅವರ ನಿಧನದಿಂದಾಗಿ ತೆರವಾಗಿರುವ ಪಣಜಿ ಕ್ಷೇತ್ರ ಹಾಗೂ ತಮಿಳುನಾಡಿನ 4 ವಿಧಾನಸಭೆ ಕ್ಷೇತ್ರಗಳಿಗೂ ಇದೇ ದಿನ ಉಪ ಚುನಾವಣೆ ನಿಡೆಯಲಿದೆ. ಉಪಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಏಪ್ರಿಲ್‌ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 

ಏಪ್ರಿಲ್‌ 22ರಂದು ಈ ಉಪಚುನಾವಣೆಯ ಅಧಿಸೂಚನೆ ಜಾರಿಯಾಗಲಿದೆ. ಏಪ್ರಿಲ್‌ 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆ ಪಡೆಯಲು ಮೇ 2 ಕೊನೆಯ ದಿನ. ಮೇ 23 ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ನಿಧನ

ಕುಂದಗೋಳ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದ ಸಿ.ಎಸ್‌. ಶಿವಳ್ಳಿ ಕಳೆದ ಮಾರ್ಚ್‌ 22ರಂದು ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮನೋಹರ ಪರ್ರೀಕರ್‌ ಅವರು ಮಾರ್ಚ್‌ 17ರಂದು ಕ್ಯಾನ್ಸರ್‌ನಿಂದ ಪಣಜಿಯಲ್ಲಿ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !