ಮಂಗಳವಾರ, ಮಾರ್ಚ್ 31, 2020
19 °C

ಪ್ರಯಾಣಿಕರ ಸಂಖ್ಯೆ ವಿರಳ: 50 ಐಷಾರಾಮಿ ಬಸ್‌ ಸಂಚಾರ ರದ್ದು

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜನ ಸಂಚಾರ ಕಡಿಮೆಯಾಗಿದ್ದು, ಬೆಂಗಳೂರಿನಿಂದ ಹೊರಡಬೇಕಿದ್ದ 50 ಐಷಾರಾಮಿ ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿದೆ.

‘ಸಾಮಾನ್ಯವಾಗಿ ಶುಕ್ರವಾರ ಬೆಂಗಳೂರಿನಿಂದ 200 ಹೆಚ್ಚುವರಿ ಬಸ್‌ಗಳ ಸಂಚಾರ ಇರುತ್ತಿತ್ತು. ಅವುಗಳ ಸಂಚಾರ ರದ್ದಾಗುವ ಜತೆಗೆ ಪ್ರತಿದಿನ ಸಂಚರಿಸುವ ಬಸ್‌ಗಳಲ್ಲೇ 50 ಬಸ್‌ಗಳನ್ನು ಕಡಿಮೆ ಮಾಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಪ್ರತಿನಿತ್ಯ 30 ಲಕ್ಷಕ್ಕೂ ಹೆಚ್ಚು ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ದಿನಕ್ಕೆ ಸರಾಸರಿ ₹8 ಕೋಟಿ ವರಮಾನ ಬರುತ್ತಿದೆ. ಸಭೆ, ಸಮಾರಂಭ, ಮದುವೆ, ಚಿತ್ರಮಂದಿರ ಬಂದ್ ಆಗಿರುವ ಕಾರಣ ಶನಿವಾರದಿಂದ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಆದಂತೆ ಬಸ್‌ಗಳ ಸಂಚಾರವನ್ನೂ ಕಡಿಮೆ ಮಾಡಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

ಕೆಎಸ್‌ಆರ್‌ಟಿಸಿ ಐಷಾರಾಮಿ ಬಸ್‌ಗಳಿಗೆ ಹತ್ತಲು ಜನ ಹೆದರುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಹೋಗುವ ಫ್ಲೈಬಸ್‌ಗಳಲ್ಲಿಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಐಷಾರಾಮಿ ಬಸ್‌ಗಳಾದ ವೋಲ್ವೊ, ಕೊರೊನಾ ಹತ್ತಲು ಜನ
ಭಯಪಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನರ್‌
‘ರಾಜ್ಯದ ಎಲ್ಲಾ ಬಸ್‌ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನಿರ್‌ಗಳನ್ನು ಅಳವಡಿಸುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ’ ಎಂದು ಶಿವಯೋಗಿ ಸಿ. ಕಳಸದ ಅವರು ತಿಳಿಸಿದರು.

‘ಪ್ರಮುಖವಾಗಿ ಬೆಂಗಳೂರು, ಮೈಸೂರು ಸೇರಿ ಜಿಲ್ಲಾ ಮಟ್ಟದ ಬಸ್ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಸುವ ಬಗ್ಗೆ ಆಲೋಚನೆ ಇದೆ. ಆರೋಗ್ಯ ಇಲಾಖೆಯವರು ಸ್ಕ್ಯಾನರ್ ಅಳವಡಿಸಿದರೆ ಅದಕ್ಕೆ ಬೇಕಿರುವ ಜಾಗವನ್ನು ಕೆಎಸ್‌ಆರ್‌ಟಿಸಿ ಒದಗಿಸಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು