ಮಂಗಳವಾರ, ಜೂಲೈ 7, 2020
27 °C
ಫೋನ್‌ ಕದ್ದಾಲಿಕೆ

ಸಿಬಿಐ ರೇಡ್‌ಗೂ ನನಗೂ ಸಂಬಂಧ ಇಲ್ಲ– ಎಚ್‌.ಡಿ.ಕುಮಾರಸ್ವಾಮಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಾರ ಮನೆ ಮೇಲಾದರೂ ರೇಡ್‌ ಮಾಡಿಕೊಳ್ಳಲಿ. ನನ್ನನ್ನು ಯಾಕೆ ಕೇಳುತ್ತೀರಿ, ನನಗೇನು ಸಂಬಂಧ? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದೆ. ಈ ವಿಚಾರವಾಗಿ ಜೆಡಿಎಸ್ ಕಚೇರಿಯಲ್ಲಿ  ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ: ಫೋನ್‌ ಕದ್ದಾಲಿಕೆ: ಅಲೋಕ್‌ ಕುಮಾರ್‌ ನಿವಾಸದಲ್ಲಿ ಸಿಬಿಐ ಅಧಿಕಾರಿಗಳ ಪರಿಶೀಲನೆ

‘ಅವರ ಮನೆ ಮೇಲೆ ರೇಡ್‌ ಮಾಡಿದರೆ ನಾನು ಏಕೆ ತಲೆ ಕೆಡಿಸಿಕೊಳ್ಳಲಿ. ಸಿಬಿಐ ರೇಡ್‌ಗೂ ನನಗೂ ಸಂಬಂಧ ಇಲ್ಲ. ನನ್ನ ತನಿಖೆಗೆ ಬೇಕಾದರೂ ಬರಲಿ, ದೇಶದ ಕಾನೂನಿನಲ್ಲಿ ಯಾರ ಮೇಲೆ ಬೇಕಾದರೂ ವಿಚಾರಣೆಗೆ ಅವಕಾಶವಿದೆ. ಅದಕ್ಕೆ ಏಕೆ ಗಾಬರಿ?‘ ಎಂದು ಪ್ರಶ್ನಿಸಿದರು. 

ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿಯೇ ಎಂದರು. 

ಇದನ್ನೂ ಓದಿ: ನಿಮ್ಮ ಫೋನ್‌ ಕದ್ದಾಲಿಕೆ ಆಗುತ್ತಿರುವ ಶಂಕೆಯೇ? ಹೀಗೆ ತಿಳಿಯಿರಿ..

ಇನ್ನಷ್ಟು... 

ಆಪರೇಷನ್‌ ಕಮಲದ ಬಗ್ಗೆಯೂ ಸಿಬಿಐ ತನಿಖೆಯಾಗಲಿ: ಸಿದ್ದರಾಮಯ್ಯ

ಫೋನ್‌ ಕದ್ದಾಲಿಕೆ ಪ್ರಕರಣ ಸಿಬಿಐಗೆ: ಸಿಎಂ ಯಡಿಯೂರಪ್ಪ

ಆಡಿಯೊ ವೈರಲ್‌: ವಿಚಾರಣೆಗೆ ಆದೇಶ

ಮೂರು ಸಲ ಕಮಿಷನರ್‌ ಫೋನ್‌ ಕದ್ದಾಲಿಕೆ?

ಫೋನ್‌ ಕದ್ದಾಲಿಕೆ: ಎಡಿಜಿಪಿ ಕೈವಾಡ?

ದೂರವಾಣಿ ಕದ್ದಾಲಿಕೆ ಪ್ರಕರಣ: ನಂಬಿಕೆಗೆ ಪೆಟ್ಟು, ತಲೆದಂಡಕ್ಕೆ ಪಟ್ಟು

ಫೋನ್‌ ಕದ್ದಾಲಿಕೆ ‘ಸದ್ದು’

ಫೋನ್ ಕದ್ದಾಲಿಕೆ ‘ಜಗಳ್‌ಬಂದಿ’: ಡಿಕೆಶಿ ಕ್ಷಮೆಯಾಚಿಸಿದ ಎಂ.ಬಿ.ಪಾಟೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು