ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಜರ್ಮನಿಯಿಂದ ಹಿಂದಿರುಗಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ಶಂಕೆ

Last Updated 16 ಮಾರ್ಚ್ 2020, 14:13 IST
ಅಕ್ಷರ ಗಾತ್ರ

ರಾಮನಗರ: ಜರ್ಮನಿಯಿಂದ ಚನ್ನಪಟ್ಟಣಕ್ಕೆ ಹಿಂದಿರುಗಿದ ವಿದ್ಯಾರ್ಥಿನಿಯೊಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಮತ್ತು ಆಕೆಯ ತಂದೆತಾಯಿಯ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ವಿದ್ಯಾಭ್ಯಾಸಕ್ಕೆಂದು ಜರ್ಮನಿಗೆ ತೆರಳಿದ್ದ ಯುವತಿ ಚನ್ನಪಟ್ಟಣ ನಗರ ವ್ಯಾಪ್ತಿಯ ನಿವಾಸಿ. 2 ದಿನಗಳ ಹಿಂದೆಯಷ್ಟೇ ಹಿಂದಿರುಗಿದ್ದರು. ಭಾನುವಾರ ಸಂಜೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ತಕ್ಷಣ ಜಾಗೃತರಾದ ಅಧಿಕಾರಿಗಳು ಆಕೆಯನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ತಪಾಸಣೆ ಮಾಡಿಸಿದ್ದಾರೆ.

ಸೋಮವಾರ ಬೆಳಿಗ್ಗಿನಿಂದಲೇ ವಿದ್ಯಾರ್ಥಿನಿ ಜತೆಗೆ ಆಕೆಯ ಸಂಪರ್ಕದಲ್ಲಿದ್ದ ಪೋಷಕರ ಪರೀಕ್ಷೆಯು ನಡೆಯಿತು. ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಟಲ ದ್ರವ ಪರೀಕ್ಷೆ ಸಹ ನಡೆದಿದೆ. ಜ್ವರ ಬಿಟ್ಟರೆ, ಕೋವಿಡ್-19 ಸೋಂಕು ಇನ್ನಿತರ ಲಕ್ಷಣಗಳು ಈಕೆಯಲ್ಲಿಲ್ಲ ಎನ್ನಲಾಗುತ್ತಿದೆ. ಆದರೂ ಜರ್ಮನಿಯಿಂದ ದೇಶಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ರೋಗ ಲಕ್ಷಣಗಳನ್ನು ಆಧರಿಸಿ ಕೋವಿಡ್-19 ವೈರಸ್ ಸೋಂಕು ತಪಾಸಣೆಗೆಂದು ಆಕೆಯ ರಕ್ತ ಮಾದರಿ ಹಾಗೂ ತಂದೆತಾಯಿಯವರ ರಕ್ತ ಮಾದರಿಯನ್ನು ವೈದ್ಯರು ಸಂಗ್ರಹಿಸಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ವರದಿ ಬರಲು ಕನಿಷ್ಠ 24 ಗಂಟೆ ಕಾಲಾವಕಾಶ ಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT