ಎಪಿಎಂಸಿ ಮಂಡಿ ಶುಲ್ಕ ಶೇ1.5 ರಿಂದ ಶೇ 0.5ಕ್ಕೆ ಇಳಿಸಲು ಕ್ರಮ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಎಪಿಎಂಸಿ ಮಂಡಿಗಳಲ್ಲಿ ವಿಧಿಸುತ್ತಿರುವ ಶುಲ್ಕವನ್ನು ಶೇ.1.5 ರಿಂದ ಶೇ 0.5 ವಿಧಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿರುವುದಾಗಿ ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಹೇಳಿದ್ದಾರೆ.
ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಎಫ್ಕೆಸಿಸಿಐ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸಲಾಯಿತು. ಹಾಲಿ ಚಾಲ್ತಿಯಲ್ಲಿರುವ ಸೆಸ್ ಅನ್ನು ಶೇ.1.5 ರಿಂದ ಶೇ.0.5ಗೆ ಇಳಿಸಲು ಎಫ್ಕೆಸಿಸಿಐ ಮಹಾಸಂಸ್ಥೆ, ಎಪಿಎಂಸಿ ಉಪ ಸಮಿತಿಯ ಅಧ್ಯಕ್ಷರಾದ ಆರ್ ಸಿ ಲಹೋಠಿ, ನಿರ್ದೇಶಕ ಟಿ. ಸಾಯಿರಾಂ ಪ್ರಸಾದ್ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ಕಾರವು ಎಪಿಎಂಸಿ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಎಪಿಎಂಸಿ ಪ್ರಾಂಗಣದ ಒಳಗೆ ಹಾಗೂ ಹೊರಗೆ ವ್ಯತ್ಯಾಸದ ಶುಲ್ಕಗಳನ್ನು ಸರಿಪಡಿಸಲು ಕೋರಲಾಯಿತು. ಮುಖ್ಯಮಂತ್ರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.